ಕರ್ನಾಟಕ

ನಾನೂ ಕುರುಬನಲ್ಲವೆ? ನನಗೆ ಅನ್ಯಾಯ ಆದಾಗ ಸ್ವಾಮೀಜಿ ಎಲ್ಲಿದ್ದರು? ಕಾಗಿನೆಲೆ ಶ್ರೀ ವಿರುದ್ಧ ಶಾಸಕ ವಿಶ್ವನಾಥ್‌ ಆಕ್ರೋಶ!

Pinterest LinkedIn Tumblr


ಮೈಸೂರು: ‘ಸ್ವಾಮೀಜಿಗಳು ರಾಜಕೀಯ ನಾಯಕರ ಬಗ್ಗೆ ,ಸರ್ಕಾರಿ ಅಧಿಕಾರಿಗಳ ಬಗ್ಗೆ ಲಾಭಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರು ಕಾಗಿನೆಲೆ ಶ್ರೀಗಳ ವಿರುದ್ಧ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌ ‘ಕಾಗಿನೆಲೆ ಶ್ರೀಗಳಿಗೆ ನನಗಾದ ಅನ್ಯಾಯ ಕಾಣಿಸಲಿಲ್ಲವೆ? ನಾನೂ ಕುರುಬನಲ್ಲವೆ? ನನಗೆ ಅನ್ಯಾಯ ಆದಾಗ ಸ್ವಾಮೀಜಿ ಎಲ್ಲಿದ್ದರು? ರಾಜ್ಯದಲ್ಲಿರುವ ಕುರುಬ ಸಂಘಟನೆಗಳು ಎಲ್ಲಿದ್ದವು? ನನಗೆ ಅನ್ಯಾಯ ಮಾಡಿವರು ಯಾರು? ಇದೇ ಸಿದ್ದರಾಮಯ್ಯ ಅಲ್ಲವೆ.ಕಾಂಗ್ರೆಸ್‌ಗೆ ಕರೆತಂದು ವಿರೋಧ ಪಕ್ಷದ ನಾಯಕನನ್ನಾಗಿಸಿದ ನನ್ನನ್ನೇ ಮೂಲೆ ಗುಂಪು ಮಾಡಿದಾಗ ಎಲ್ಲಿದ್ದರು’ ಎಂದು ತೀವ್ರವಾಗಿ ಕಿಡಿ ಕಾರಿದರು.

‘ನಂಜಾವಧೂತ ಶ್ರೀಗಳು ಕುಮಾರಸ್ವಾಮಿ ಪರ ಮಾತನಾಡುತ್ತಾರೆ, ಮಾತೆ ಮಹಾದೇವಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಹೇಳುತ್ತಾರೆ. ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಪರ ಮಾತನಾಡುತ್ತಾರೆ. ಇದು ಸರಿಯಲ್ಲ’ ಎಂದರು.

‘ಮಠಗಳ ವಿರೋಧಿ ಆಗಿದ್ದ ಸಿದ್ದರಾಮಯ್ಯ ನಮ್ಮ ಮಠಕ್ಕೂ ವಿರೋಧಿಸಿದ್ದರು. ಮಠ ಬೇಡ ಅಂತಿದ್ದವರುಎನ್ನುವುದನ್ನು ಕಾಗಿನೆಲೆ ಶ್ರೀಗಳು ತಿಳಿದುಕೊಳ್ಳಬೇಕು. ಈಗ ಯಾಕೆ ಅವರ ಪರ ವಕಾಲತ್ತು ವಹಿಸುತ್ತೀರಿ. ಸಿದ್ದರಾಮಯ್ಯ 4 ವರ್ಷ ತಮ್ಮ ಸರ್ಕಾರದಲ್ಲಿ ಒಬ್ಬ ಕುರುಬನನ್ನೂ ಸಚಿವನನ್ನಾಗಿಸಲಿಲ್ಲ. ಕೊನಗೇ ರೆವಣ್ಣ ಆದ್ರು. ಆಗ ಯಾಕೆ ಕೇಳಲಿಲ್ಲ. ನಾವು 6 ಕಡೆ ಮಠ ಕಟ್ಟಿದ್ದೇವೆ. ನಿಮ್ಮ ಮಠ ಸಂಘಟನೆಗಳು ಸಿದ್ದರಾಮಯ್ಯ ಒಬ್ಬರಿಗೊಸ್ಕರ ಇದೆಯೋ ? ನಿಮ್ಮನ್ನು ಸ್ವಾಮಿ ಮಾಡಿದವರು ಯಾರು’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರನ್ನು ಜನ ಸೋಲಿಸಿದ್ದಲ್ಲ. ಅವರನ್ನು ಅವರ ನಡವಳಿಗೆ ನಿಮ್ಮನ್ನು ಸೋಲಿಸಿದ್ದು’ ಎಂದರು.

ತಿರುಗೇಟು ನೀಡಿದ ಕನಕಪೀಠದ ನಿರಂಜನಾನಂದಪುರಿ ಶ್ರೀ

ವಾಗ್ಧಾಳಿ ನಡೆಸಿದ ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಅವರಿಗೆ ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು 1992 ರಿಂದ ಸಮಾಜ ಕಟ್ಟುವಲ್ಲಿ ವಿಶ್ವನಾಥ್‌ ಅವರದ್ದೂ ಕೂಡ ಪ್ರಮುಖ ಪಾತ್ರ ಇದೆ .ಅವರು ನಮ್ಮ ಸಮಾಜದ ಪ್ರಮುಖ ನಾಯಕರು. ನಮ್ಮನ್ನ ಟೀಕೆ ಮಾಡಿ ಸಾಮಾಜವನ್ನು ಟೀಕೆ ಮಾಡಿ ಅವರಿಗೆ ಒಳ್ಳೆಯದಾಗುತ್ತದೆ ಅಂತಾದರೆ ನಮ್ಮದೇನು ಅಭ್ಯಂತರವಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ.

ವಿಶ್ವನಾಥ್‌ ಅವರು ತಮ್ಮ ಸ್ವಯಂಕೃತ ತಪ್ಪಿನಿಂದ ರಾಜಕೀಯದಲ್ಲಿ ಹಾಳಾಗಿದ್ದಾರೆ. ಹಿಂದೆ ದೇವೇಗೌಡ ಅವರನ್ನು ಘಟಸರ್ಪ ಎಂದಿದ್ದರು. ಸಿದ್ದರಾಮಯ್ಯ ಅವರನ್ನು ಕಪ್ಪೆ ಎಂದಿದ್ದರು ಎಂದರು.

ನಾನು ರಾಜಕೀಯದಲ್ಲಿ ಎಂದಿಗೂ ಮೂಗು ತೂರಿಸುವುದಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯ ಆದಾಗ ಧ್ವನಿ ಎತ್ತುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

Comments are closed.