ಕರ್ನಾಟಕ

ಹೃದಯ ಬಡಿತ ನಿಂತು ಹೋಗಿದ್ದರೂ ಬದುಕುಳಿದ ಉದ್ಯಮಿ!

Pinterest LinkedIn Tumblr


ಬೆಂಗಳೂರು: ಗೋವಾ ಮೂಲದ ಉದ್ಯಮಿಯೊಬ್ಬರ ಹೃದಯ ಛಿದ್ರಗೊಂಡಿದ್ದು, ಹೃದಯ ಬಡಿತ ನಿಂತು ಹೋಗಿದ್ದರೂ ಅವರು ಬದುಕುಳಿದ ಅಚ್ಚರಿಯ ಘಟನೆ ನಗರದಲ್ಲಿ ನಡೆದಿದೆ. ಮೇ 18 ರಂದು ಬನಶಂಕರಿ ಬಳಿ ಉದ್ಯಮಿಗೆ ಚಾಕುವಿನಿಂದ ಇರಿಯಲಾಗಿತ್ತು. ಅಲ್ಲದೆ, ಹೃದಯ ಬಡಿತ ನಿಂತು ಹೋಗಿದ್ದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇವರನ್ನು ವೈದ್ಯರು ಬದುಕಿಸಿದ್ದಾರೆ.

ಹೃದಯ ಛಿದ್ರವಾದಂತಹ ಸ್ಥಿತಿಯಲ್ಲಿ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಯಾಕಂದ್ರೆ, ಈ ರೀತಿಯ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಬದುಕುಳಿದ ಸ್ಥಿತಿಯಲ್ಲಿ ಕರೆದುತರುವುದು ಅಪರೂಪ ಎಂದು ವೈದ್ಯರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ವೈದ್ಯರ ತುರ್ತು ಕ್ರಮಗಳಿಂದಾಗಿ ಗೋವಾ ಮೂಲದ 25 ವರ್ಷದ ಉದ್ಯಮಿ ಬದುಕುಳಿದಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಚೂಪಾದ ವಸ್ತುವಿನಿಂದ ವ್ಯಕ್ತಿಗೆ ಇರಿಯಲಾಗಿದ್ದು, ಇದರಿಂದ ರೋಗಿಯ ದೇಹಕ್ಕೆ ತೀವ್ರವಾದ ಗಾಯವಾಗಿತ್ತು. ಇದರಿಂದ ಉದ್ಯಮಿಯ ಶ್ವಾಸಕೋಶ ಹಾಗೂ ಹೃದಯಕ್ಕೆ ತೀವ್ರ ಗಾಯ ಮಾಡಿತ್ತು. ಹೀಗಾಗಿ ಅವನ ಹೃದಯದ ಬಡಿತವೇ ನಿಂತುಹೋಗಿತ್ತು ಎಂದು ಬೆಂಗಳೂರಿನ ಸಾಗರ್ ಆಸ್ಪತ್ರೆಯ ವೈದ್ಯೆ ಅಶ್ವಿನಿ ಕುಮಾರ್ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೆಲಸವಿದ್ದ ಕಾರಣ ಗೋವಾ ಮೂಲದ ಉದ್ಯಮಿ ನಗರಕ್ಕೆ ಬಂದಿದ್ದರು. ಈ ವೇಳೆ, ಅವರ ಮೇಲೆ ದಾಳಿಯಾಗಿತ್ತು. ಆದರೆ, ಯಶಸ್ವಿಯಾಗಿ ಸರ್ಜರಿ ಮಾಡಲಾಗಿದೆ. ನಾಲ್ಕು ಗಂಟೆಗಳ ಆಪರೇಷನ್‌ಗೆ 25 ಯೂನಿಟ್‌ನಷ್ಟು ರಕ್ತ ಬೇಕಾಗಿತ್ತು. ಕೇವಲ ಎರಡು ದಿನಗಳಲ್ಲಿ ಈತನ ಗೆಳೆಯರು ಹಾಗೂ ಸಂಬಂಧಿಕರು 16 ಯೂನಿಟ್‌ನಷ್ಟು ರಕ್ತದಾನ ಮಾಡಿದ್ದರು ಎಂದೂ ವೈದ್ಯರು ಮಾಹಿತಿ ನೀಡಿದ್ದಾರೆ.

Comments are closed.