ಕರ್ನಾಟಕ

ಪತ್ರಕರ್ತೆ​ ಗೌರಿ ಲಂಕೇಶ್ ಹತ್ಯೆ: ಮತ್ತೆ ಇಬ್ಬರು ಎಸ್‌ಐಟಿ ವಶಕ್ಕೆ

Pinterest LinkedIn Tumblr

ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮತ್ತೆ ಇಬ್ಬರು ಯುವಕರನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಬಂಧಿತನಾಗಿರುವ ವಿಜಯಪುರ ತಾಲೂಕಿನ ರತ್ನಾಪುರ ಗ್ರಾಮದ ಮನೋಹರ ಯಡವೆಯ ಸ್ನೇಹಿತ ಶ್ರೀನಿವಾಸ ಭಂಡಾರಿ ಮತ್ತು ಸಹೋದರ ರಘುನಾಥನನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನವೀನ್‌, ಅಮೋಲ್‌ ಕಾಳೆ, ಅಮಿತ್‌ ದೇಗ್ವೆಕರ್‌, ಮನೋಹರ್‌ ಯಡವೆ , ಪ್ರವೀಣ್‌ ಅವರನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ. ಆರೋಪಿ ಕೆ.ಟಿ.ನವೀನ್‌ಕುಮಾರ್‌ ಜಾಮೀನು ಅರ್ಜಿಯ ವಿಚಾರಣೆ ಮುಗಿಸಿರುವ ನ್ಯಾಯಾಲಯ ತೀರ್ಪನ್ನು ಜು.9 ಕ್ಕೆ ನಿಗದಿ ಮಾಡಿದೆ.

Comments are closed.