ಕರ್ನಾಟಕ

ಬಾಲಕಿಯ ಬೈಸಿಕಲ್ ಕನಸು ಫೇಸ್‌ಬುಕ್‌ ಪೋಸ್ಟ್‌ನಿಂದ ನನಸು

Pinterest LinkedIn Tumblr


ಬೆಂಗಳೂರು: ದೃಷ್ಟಿಹೀನ ದಂಪತಿಯೊಂದು ತಮ್ಮ 8 ವರ್ಷ ವಯಸ್ಸಿನ ಮಗಳಿಗೆ ಬೈಸಿಕಲ್ ಕೊಡಿಸಬೇಕೆಂದು ಕಟ್ಟಿಟಿದ್ದ ಕನಸು ಫೇಸ್‌ಬುಕ್ ಪೋಸ್ಟ್ ಮೂಲಕ ಈಡೇರಿದೆ.

ಹೌದು, ನಿಂಬೆ ಹಣ್ಣು ಮಾರಿ ಜೀವನ ಸಾಗಿಸುತ್ತಿರುವ ನಾಗೇಶ್ ಮೂರ್ತಿ ಹಾಗೂ ಸುಧಾ ದಂಪತಿ, ತಮ್ಮ ಮಗಳಿಗೆ ಬೈಸಿಕಲ್ ಕೊಡಿಸಬೇಕೆಂಬ ಕನಸು ಕಟ್ಟಿದ್ದರು. ಆದರೆ, ಕಿತ್ತು ತಿನ್ನುವ ಬಡತನದ ನಡುವೆ ತಮ್ಮ ಕನಸು ಕನಸಾಗೇ ಉಳಿದಿತ್ತು.

ಕುರುಡು ದಂಪತಿ ತಮ್ಮ ಪುತ್ರಿಗೆ ಬೈಸಿಕಲ್ ಕೊಡಿಸಲು ಹೆಣಗಾಡುತ್ತಿರುವುದನ್ನು ಕಂಡ ವೈಲ್ಡ್‌ಫೀಲ್ಡ್‌‌ನ ಆರ್ಥಿಕ ತಜ್ಞ ನಾಗಾರಾಜ್ ಬಸಾರಕೋಡ್ ಎಂಬುವವರು ದಂಪತಿಯ ವಿವರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕ್ಷಿಪ್ರವಾಗಿ ಸ್ಪಂದಿಸಿದ ಕೆಲವು ಉದಾರಿಗಳು ಕೇವಲ 24 ಗಂಟೆಯಲ್ಲಿ ಬೈಸಿಕಲ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಬಸಾರಕೋಡ್ ಅವರು ವೈಟ್‌ಫೀಲ್ಡ್ ರೈಸಿಂಗ್ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಕುರುಡು ದಂಪತಿಯ ಕಥೆಯನ್ನು ಪೋಸ್ಟ್ ಮಾಡುವ ಜತೆಗೆ ಅನ್ವಯ ಫೌಂಡೇಶನ್‌ನ ಸಂಪತ್ ರಾಮಾನುಜಮ್ ಅವರಲ್ಲೂ ಈ ಬಗ್ಗೆ ಮನವಿ ಮಾಡಿದ್ದರು.

ಅನ್ವಯ ಫೌಂಡೇಷನ್ ಹಳೆಯ ಬೈಸಿಕಲ್‌ಗಳನ್ನು ಸಂಗ್ರಹಿಸಿ ಅಗತ್ಯವಿರುವ ವ್ಯಕ್ತಿಗಳಿಗೆ ವಿತರಿಸುವ ಕೆಲಸ ಮಾಡುತ್ತದೆ. ರಾಮಾನುಜಂ ಅವರು ನಾನಾ ಸೈಕ್ಲಿಂಗ್‌ ಗ್ರೂಪ್‌ಗಳಿಗೆ ಈ ಪೋಸ್ಟ್‌ ಶೇರ್‌ ಮಾಡಿದ್ದು, ಜೆಸ್ಟ್‌ ಪೆಡಲ್‌ ಸೈಕ್ಲಿಂಗ್‌ ಗ್ರೂಪ್‌ ಇದಕ್ಕೆ ತಕ್ಷಣ ಸ್ಪಂದಿಸಿದೆ. ಕೊನೆಗೂ ಮಾರತ್‌ಹಳ್ಳಿಯ ಸೈಕಲ್‌ ಕಲೆಕ್ಷನ್‌ ಸೆಂಟರ್‌ನಿಂದ ಒಂದು ಸೈಕಲ್‌ ಪಡೆದು ದೃಷ್ಟಿಹೀನ ದಂಪತಿಯ ಪುತ್ರಿಗೆ ನೀಡಿದ್ದಾರೆ.

Comments are closed.