ಕರ್ನಾಟಕ

ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ

Pinterest LinkedIn Tumblr

ಹುಬ್ಬಳ್ಳಿ: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ಮೊಹಮದ್​ ರಫೀಕ್​ ಆಯಟ್ಟಿ (40) ಕೊಲೆಯಾದ ವ್ಯಕ್ತಿ. ಹುಬ್ಬಳ್ಳಿಯ ಮಾರಡಗಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಶಬಾನಾ ಮತ್ತು ಭಾಷಾ ಸಾಬ್​ ಬಂದಿತ ಆರೋಪಿಗಳು.

ಜೂನ್‌ 11 ರಂದು ನವನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಇದು ಕೊಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿತ್ತು. ತನಿಖೆ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಎಸ್ ಆರ್ ನಾಯ್ಕ ನೇತೃತ್ವದ ತಂಡ ಕೊಲೆಗೆ ನಿಖರ ಕಾರಣವೇನೆಂಬುದನ್ನು ಪತ್ತೆ ಹಚ್ಚಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾಗಿ ರಫೀಕ್​ ಪತ್ನಿ ಶಬಾನಾ ಮತ್ತು ಭಾಷಾ ಸಾಬ್​ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

ಶಬಾನಾ ಮತ್ತು ಭಾಷಾ ಸಾಬ್​ ನಡುವೆ ಅನೈತಿಕ ಸಂಬಂಧವಿತ್ತು. ಪತ್ನಿಯ ಈ ದುರ್ನಡತೆಯನ್ನು ಪತಿ ರಫೀಕ್​ ಪ್ರಶ್ನೆ ಮಾಡಿದ್ದಾನೆ. ಅಲ್ಲದೆ, ವಿರೋಧಿಸಿದ್ದಾನೆ. ಈ ಕಾರಣಕ್ಕೆ ಇಬ್ಬರೂ ಸೇರಿ ರಫೀಕ್​ನನ್ನು ಕೊಡಲಿಯಿಂದ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.