ಕರ್ನಾಟಕ

ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ನಟಿ ರಮ್ಯ ಟ್ವಿಟ್ಟರ್​ನಲ್ಲಿ ಅವಿಶ್ವಾಸ ನಿರ್ಣಯ ಮಂಡನೆ..!

Pinterest LinkedIn Tumblr

ಬೆಂಗಳೂರು(ಜುಲೈ.20): ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ನಟಿ ರಮ್ಯಾ ಅವರು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ಧಾರೆ. ‘ಬಿಜೆಪಿ ಫಾರ್​ ಇಂಡಿಯಾ’ ಎನ್ನುವ ಆ್ಯಶ್ ಟ್ಯಾಗ್​ ಬಳಸಿ ರಮ್ಯಾ ಅವರು, ಬಿಜೆಪಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿ, ಬಡವರನ್ನು ಅತೀ ಬಡವರನ್ನಾಗಿಸಿದೆ ಎಂದು ಟ್ವೀಟ್​ ಮೂಲಕ ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ್ಧಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಅಧಿಕೃತ ಟ್ವಿಟ್ಟರ್​ ಖಾತೆಯಿಂದ ಒಂದು ಪೋಸ್ಟ್​ ಮಾಡಲಾಗಿದೆ. ಪೋಸ್ಟ್​ನಲ್ಲಿ 2004 ರಲ್ಲಿ ನಮ್ಮ ದೇಶದ ಬಡತನ ರೇಖೆ ಶೇ.40.71 ರಷ್ಟಿತ್ತು. ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ​ ಸರ್ಕಾರ 2012 ರ ವೇಳೆಗೆ ಶೇ.40.71 ರಷ್ಟಿದ್ದ ಬಡತನ ರೇಖೆಯನ್ನು ಶೇ.21.9% ರಷ್ಟಿಗೆ ಇಳಿಸಿದೆ. ಹೀಗಾಗಿ ದೇಶದ ಬಡತನ ರೇಖೆಯನ್ನು ಕಮ್ಮಿ ಮಾಡಿದ ನಮ್ಮ ಕಾಂಗ್ರೆಸ್​ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಟ್ವಿಟ್​ನಲ್ಲಿ ಬರೆಯಲಾಗಿದೆ.

And @BJP4India on the other hand has made the rich richer and the poor poorer- https://t.co/V8DeRujE32

— Divya Spandana/Ramya (@divyaspandana) July 20, 2018

ಕಾಂಗ್ರೆಸ್​ ಟ್ವೀಟ್​ ಶೇರ್​ ಮಾಡಿ ರೀಟ್ವೀಟ್​ ಮಾಡಿರುವ ಮಾಜಿ ಸಂಸದೆ, ನಟಿ ರಮ್ಯಾ ಅವರು, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರನ್ನು ಅತೀ ಬಡವರನ್ನಾಗಿಸಿ, ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದೆ ಎಂದು ಬರೆಯುವ ಮೂಲಕ ಬಿಜೆಪಿ ಕಾಲೆಳೆದಿದ್ಧಾರೆ.

ಈ ಹಿಂದೆಯೂ ಮಾಜಿ ಸಂಸದೆ ರಮ್ಯಾ ಬಿಜೆಪಿ ವಿರುದ್ಧ ಟ್ವಿಟ್ಟರ್ ವಾರ್ ಮುಂದುವರೆಸಿದ್ದರು. ಮೋದಿ ಭಾಷಣವನ್ನ ವ್ಯಂಗ್ಯ ಮಾಡಿದ್ದ ರಮ್ಯಾ, ಮೋದಿ ಅವರೇ, ‘ದೋಖಾ’ಲಾಂ (ಡೋಕ್ಲಾಂ) ಬಗ್ಗೆ ಮಾತನಾಡೋಣ ಎಂದು ಬರೆದಿದ್ದರು. ಮೋದಿ ಪ್ರಧಾನಿಯಾಗುವುದಕ್ಕೂ ಮುಂಚೆ 2013ರಲ್ಲಿ ಯುಪಿಎ ಸರ್ಕಾರದ ವಿರುದ್ಧ ಮಾಡಿದ್ದ ಟ್ವೀಟ್‍ನ ಸ್ಕ್ರೀನ್‍ಶಾಟ್ ಬಳಸಿ ಯುಪಿಎ ಬದಲಿಗೆ ಎನ್‍ಡಿಎ ಎಂದು ತಿದ್ದಿ ಚಿತ್ರವನ್ನ ಹಾಕುವ ಮೂಲ ವಿವಾದ ಸೃಷ್ಟಿಸಿದ್ದರು.

ಅಲ್ಲದೇ ಪಕೋಡಾ ಹೇಳಿಕೆ, ಚೌಕಿದಾರ, ಮಾಬ್​ ಲಿಂಚಿಂಗ್​, ಜಿಎಸ್​ಟಿ ಮತ್ತು ಪ್ರಧಾನಿ ಮೋದಿ ಅವರ ಅಣಬೆ ಕುರಿತು ರಮ್ಯ ಟ್ವೀಟ್​ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ರಮ್ಯಾ​ ಬಿಜೆಪಿ ವಿರುದ್ಧ ಟ್ವೀಟ್​ ವಾರ್​ ಮುಂದುವರಿಸಿದ್ದು, ಟ್ವಿಟ್ಟರ್​ನಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಂಸದೆ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.

Comments are closed.