ಕರ್ನಾಟಕ

ಮೂರು ವರ್ಷದ ಬಾಲಕನ ಬಾಯಲ್ಲಿ ಜನನಾಂಗವಿಟ್ಟ ವೃದ್ಧನ ಬಂಧನ

Pinterest LinkedIn Tumblr


ಧಾರವಾಡ: ಮೂರು ವರ್ಷದ ಬಾಲಕನ ಮೇಲೆ ವೃದ್ಧನೊರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗಾಂಧಿ ನಗರದಲ್ಲಿನ ಯುರೋ‌ ಕಿಡ್ಸ್ ಪ್ರಿ ಸ್ಕೂಲ್‌ನಲ್ಲಿ ನಡೆದಿದೆ.

ಘಟನೆ ಸೋಮವಾರ ನಡೆದಿದ್ದು, ಬಾಲಕ ಮನೆಗೆ ಹೋಗಿ ನೋವು ತೋಡಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಳಮಡ್ಡಿಯ ಮನೋಹರ ಕುಲಕರ್ಣಿ ಎಂಬ ವೃದ್ಧನಿಂದ ಈ ಕೃತ್ಯ ನಡೆದಿದೆ.

ಶಾಲೆಗೆ ಮೊಮ್ಮೊಗನನ್ನ ಬಿಡಲು ಹೋದ ವೃದ್ಧ ಬೇರೊಂದು ಬಾಲಕನ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಬಾಲಕನ ಬಾಯಲ್ಲಿ ಜನನಾಂಗ ಇಟ್ಟು ವಿಕೃತ ಮೆರೆದಿದ್ದಾನೆ.

ದೂರಿನ ಬಳಿಕ ಶಾಲೆಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಬಾಲಕನ ಪಾಲಕರಿಂದ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫೋಕ್ಸೊ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ವೃದ್ಧನನ್ನ ಬಂಧಿಸಿ ತಪಾಸಣೆಗಾಗಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು.

Comments are closed.