ಕರ್ನಾಟಕ

ಕಳವು ಮಾಡಿದ ಮನೆಗೆ ಬೆಂಕಿ ಇಟ್ಟ ಕಳ್ಳರು

Pinterest LinkedIn Tumblr


ಶಿವಮೊಗ್ಗ: ಮೆಸ್ಕಾಂ ಕ್ವಾರ್ಟರ್ಸ್‌ನ ಎರಡು ಮನೆಗಳಲ್ಲಿ ಕಳ್ಳತನ ಮಾಡಿರುವ ಕಳ್ಳರು, ಕಳ್ಳತನದ ನಂತರ ಒಂದು ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಎಂಆರ್‌ಎಸ್‌ ವೃತ್ತದ ಬಳಿಯ ಮೆಸ್ಕಾಂ ಕ್ವಾರ್ಟರ್ಸ್‌ನಲ್ಲಿ ಕಳ್ಳರು ಕರಾಮತ್ತು ತೋರಿಸಿದ್ದು, ಎರಡು ಮನೆಗಳಲ್ಲಿ ಕಳ್ಳತನ ನಡೆಸಿ ಬೆಂಕಿ ಇಟ್ಟಿದ್ದಾರೆ.

ಮೆಸ್ಕಾಂ ಇಂಜಿನಿಯರ್ ಶಿವಕುಮಾರ್ ಹಾಗೂ ಜೆಇ ಮಂಜುನಾಥ್ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ಶಿವಕುಮಾರ್ ಮನೆಗೆ ಮಾತ್ರ ಬೆಂಕಿ ಹಚ್ಚಿದ್ದಾರೆ.

ಮನೆಯಲ್ಲಿದ್ದ 58 ಗ್ರಾಂ ಬಂಗಾರ, 300 ಗ್ರಾಂ ಬೆಳ್ಳಿ ಹಾಗೂ 35 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಮನೆಯವರೆಲ್ಲ ದೇವಸ್ಥಾನಕ್ಕೆ ತೆರಳಿರುವ ವೇಳೆ ಘಟನೆ ನಡೆದಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ.

ತುಂಗಾನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.