ಕರ್ನಾಟಕ

ಇಂದು ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್​

Pinterest LinkedIn Tumblr


ಬೆಂಗಳೂರು: ದೇಶದಾದ್ಯಂತ ಇಂದು ಖಾಸಗಿ ಆಸ್ಪತ್ರೆ ಬಂದ್​ ಗೆ ಕರೆ ನೀಡಲಾಗಿದ್ದು, ತುರ್ತು ಸೇವೆ ಹೊರತು ಪಡಿಸಿ ಉಳಿದ ಸೇವೆಗಳು ಲಭ್ಯವಾಗುವುದಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ,

ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ ಬಿಲ್​ಗೆ ಖಾಸಗಿ ವೈದ್ಯರು ಮತ್ತು ಸಂಸ್ಥೆಗಳು ತೀವ್ರವಾಗಿ ವಿರೋಧಿಸಿದ್ದು, ಇದಕ್ಕಾಗಿ ಮುಷ್ಕರ ನಡೆಸಲು ವೈದ್ಯರು ಮುಂದಾಗಿದ್ದಾರೆ.

ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಜು.30ರಂದು ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿದ್ದು ಬಡವರ ವಿರೋಧಿಯಾಗಿದೆ. ಈ ವಿಧೇಯಕದ ಪ್ರಕಾರ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟವಾಗಲಿದೆ. ಈ ಹಿನ್ನಲೆಯಲ್ಲಿ ಈ ಬಿಲ್​ ಮಂಡಿಸಬಾರದು ಎಂದು ಭಾರತೀಯ ವೈದ್ಯಕೀಯ ಸಂಘ ಒತ್ತಾಯಿಸಿದೆ.

ಈ ಬಂದ್​ ಕರ್ನಾಟಕದಲ್ಲೂ ಬಂದ್ ಪರಿಣಾಮ ಬೀರಲಿದ್ದು, ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೂ ಬಂದ್ ನಲ್ಲಿ ಭಾಗವಹಿಸುವಂತೆ ಭಾರತೀಯ ವೈದ್ಯಕೀಯ ಸಂಘ ಮನವಿ ಮಾಡಿದೆ. ಈ ಬಗ್ಗೆ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ನ್ಯಾಷನಲ್​ ಮೆಡಿಕಲ್​ ಕಮಿಷನಲ್​ ಬಿಲ್​ ಏನಿದೆ?

1) ಭಾರತ ವೈದ್ಯಕೀಯ ಮಂಡಳಿ ಬದಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್​ಎಂಸಿ) ಸ್ಥಾಪನೆ.

2) ನ್ಯಾಷನಲ್ ಮೆಡಿಕಲ್ ಕಮಿಷನ್ ಮೂಲಕ ಸರಕಾರವು ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ.40ರಷ್ಟು ಸೀಟುಗಳಿಗೆ ಶುಲ್ಕ ನಿಗದಿ ಮಾಡುವ ಅಧಿಕಾರ ಹೊಂದಿರಲಿದೆ.

3) ವೈದ್ಯಕೀಯ ಪದವಿ ಹೊಂದಿದವರು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯಲು ಅಥವಾ ವೈದ್ಯಕೀಯ ಸೇವೆ ಪ್ರಾರಂಭಿಸಲು ಲೈಸೆನ್ಸ್ ಪಡೆಯಲು exit ಪರೀಕ್ಷೆ ಬರೆಯಬೇಕಾಗುತ್ತದೆ.

4) ನೊಂದಾಯಿತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚು ಸೀಟುಗಳನ್ನು ಸೇರಿಸಲು ಅಥವಾ ಸ್ನಾತಕೋತ್ತರ ಶಿಕ್ಷಣ ಪ್ರಾರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮತಿ ಬೇಕಿಲ್ಲ. ಇದರಿಂದ ವೈದ್ಯಕೀಯ ಸಂಸ್ಥೆಯ ವ್ಯವಹಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವ ಸಾಧ್ಯತೆ ಕಡಿಮೆ ಆಗುತ್ತದೆ.

5) ನೂತನ ನ್ಯಾಷನಲ್ ಮೆಡಿಕಲ್ ಕಮಿಷನ್​ನಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯಲ್ಲಿ ಇಳಿಕೆ. ನೂತನ ಸಮಿತಿಯಲ್ಲಿ 125ರ ಬದಲು 59 ನಾಮನಿರ್ದೇಶಿಕ ಸದಸ್ಯರು ಇರುತ್ತಾರೆ. ವೈದ್ಯಕೀಯೇತರ ಸದಸ್ಯರ ಪ್ರಮಾಣವೇ ಹೆಚ್ಚು.

6) ಆಯುಷ್ ವೈದ್ಯರಿಗೂ ಸ್ವಲ್ಪಮಟ್ಟಗೆ ಆಲೋಪತಿ ವೈದ್ಯಶಾಸ್ತ್ರದ ಶಿಕ್ಷಣ(ಬ್ರಿಡ್ಜ್ ಕೋರ್ಸ್). ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ಆಯುಷ್ ವೈದ್ಯರ ನಿಯೋಜನೆಗೆ ಒತ್ತು.

ಇನ್ನು ಕಳೆದ ವರ್ಷ ಆಗಸ್ಟ್​ನಲ್ಲಿ ಕೆಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯಾದ್ಯಂತ ಆಗ್ರಹಿಸಿ ವೈದ್ಯರು ಒಂದು ವಾರಕ್ಕೂ ಹೆಚ್ಚು ಕಾಲ ಬಂದ್​ ನಡೆಸಿದ್ದರು. ಇದರಿಂದಾಗಿ ಹಲವು ರೋಗಿಗಳು ಪ್ರಾಣವನ್ನು ಕಳೆದುಕೊಂಡಿದ್ದರು. ಕೊನೆಗೆ ಈ ಕಾಯ್ದೆಗೆ ಮಾರ್ಪಾಡು ಮಾಡಿ ಆರೋಗ್ಯ ಸಚಿವರಾಗಿದ್ದ ರಮೇಶ್​ ಕುಮಾರ್ ಸದನದಲ್ಲಿ ಮಂಡಿಸಿದ್ದರು. ​

Comments are closed.