ಕರ್ನಾಟಕ

ಲೈವ್‌ ಬ್ಯಾಂಡ್‌ ನಡೆಸಲು ಪರವಾನಗಿ ಕಡ್ಡಾಯ

Pinterest LinkedIn Tumblr


ಬೆಂಗಳೂರು: ಲೈವ್‌ ಬ್ಯಾಂಡ್‌(ಮ್ಯೂಸಿಕ್‌), ಡಿಸ್ಕೊ ಥೆಕ್‌, ಕ್ಯಾಬರೆ ಪ್ರದರ್ಶನ ನಡೆಸಲು ಲೈಸೆನ್ಸ್‌ ಕಡ್ಡಾಯ ಆದೇಶವನ್ನು ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಆದೇಶಿಸಿದೆ.

ಕಮಿಷನರೇಟ್‌ ವ್ಯಾಪ್ತಿಯಲ್ಲಿ ಎಲ್ಲಾ ಸಾರ್ವಜನಿಕ ಮನರಂಜನೆ ಸಂಸ್ಥೆಗಳು ಲೈವ್‌ ಬ್ಯಾಂಡ್‌ ಮ್ಯೂಸಿಕ್‌ ನಡೆಸಲು ಪೊಲೀಸ್‌ ಆಯುಕ್ತರಿಂದ ಪರವಾನಗಿ ಪಡೆದಿರಬೇಕು.

ಪರವಾನಗಿ ಪಡೆಯದೆ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರೆಸ್ಟೋರೆಂಟ್‌, ಕೇಂದ್ರಗಳ ಮಾಲೀಕರು ನಿಗದಿತ ಸಮಯದೊಳಗೆ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸದಿದ್ದರೆ ಇಂಥ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಸೂಚಿಸಿ ಕ್ಲೋಸರ್‌ ನೋಟಿಸ್‌ ನೀಡಲಾಗುವುದೆಂದು ಪೊಲೀಸ್‌ ಆಯುಕ್ತರ ಪ್ರಕಟಣೆ ತಿಳಿಸಿದೆ.

Comments are closed.