ಕರ್ನಾಟಕ

3 ಕೋಳಿ ನುಂಗಿದ 10 ಅಡಿ ಉದ್ದದ ಹೆಬ್ಬಾವು!

Pinterest LinkedIn Tumblr


ಕೊಡಗು: ಮಡಿಕೇರಿ ತಾಲೂಕಿನ ಚೆತ್ತುಕಾಯ ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಮೂರು ಕೋಳಿ ನುಂಗಿ ಕೆಲಹೊತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು.

ಚೆತ್ತುಕಾಯ ಗ್ರಾಮದ ಎನ್.ಸಿ.ರಾಧಾಕೃಷ್ಣ ಎಂಬವರ ಮನೆ ಹಿತ್ತಲಿನಲ್ಲಿ ನಿರ್ಮಿಸಿದ್ದ ಕೋಳಿ ಗೂಡಿನಲ್ಲಿ ಬೆಳಗ್ಗೆ ಹೆಬ್ಬಾವು ಪತ್ತೆಯಾಗಿದ್ದು, ಅಲ್ಲಿಯೇ ಇದ್ದ ಮೂರು ಕೋಳಿಗಳನ್ನು ನುಂಗಿತ್ತು. ಹೆಬ್ಬಾವು ಕೋಳಿ ಗೂಡಿನಲ್ಲಿ ಇರುವುದು ಗೊತ್ತಾಗುತ್ತಿದ್ದಂತೆ ರಾಧಾಕೃಷ್ಣ ಅವರ ಮನೆಯ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಕರಿಕೆ ಶಾಖೆಯ ಉಪವಲಯ ಅರಣ್ಯಧಿಕಾರಿ ಪಿ.ಟಿ.ಶಶಿ ಸ್ಥಳಕ್ಕೆ ಆಗಮಿಸಿ 10 ಅಡಿ ಉದ್ದ ಹಾಗೂ 16 ಕೆಜಿ ತೂಕದ ಹೆಬ್ಬಾವನ್ನು ಸೆರೆ ಹಿಡಿದರು. ಬಳಿಕ ಅದನ್ನು ತಲಕಾವೇರಿ ವನ್ಯಧಾಮದಲ್ಲಿ ಬಿಡಲಾಯಿತು. ಕಳೆದ ವರ್ಷವೂ ರಾಧಾಕೃಷ್ಣ ಅವರ ಆವರಣದಲ್ಲಿ ಒಂದು ಹೆಬ್ಬಾವು ಪತ್ತೆಯಾಗಿತ್ತು. ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ಅವರು ಇದುವರೆಗೆ ಒಂದು ಕಾಳಿಂಗ ಸರ್ಪ ಸೇರಿದಂತೆ ಒಟ್ಟು 11 ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ತಗೆದುಕೊಂಡು ಹೋಗಿ ಬಿಟ್ಟಿದ್ದಾರೆ.

Comments are closed.