ಚೆನ್ನೈ: ಕಾಡುಗಳ್ಳ ವೀರಪ್ಪನ್ ವರನಟ ಡಾ. ರಾಜ್ಕುಮಾರ್ ಅವರನ್ನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು. ಎಲ್ಲಾ 9 ಆರೋಪಿಗಳನ್ನು ಖುಲಾಸೆಗೊಳಿಸಿ ಈರೋಡ್ನ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಆರೋಪ ಸಾಬೀತುಪಡಿಸವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ತೀರ್ಪು ಪ್ರಕಟಿಸಿದೆ.
2000 ಇಸವಿಯ ಜುಲೈ 30 ರಂದು, ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಅವರನ್ನು, ವೀರಪ್ಪನ್ಮತ್ತವರ ತಂಡ ಅಪಹರಿಸಿತ್ತು. 3 ತಿಂಗಳ ಕಾಲ ರಾಜ್ ಅವರನ್ನು ಸತ್ಯಮಂಗಳಂ ಹಾಗೂ ಭವಾನಿ ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು.
ತಮಿಳು ಮ್ಯಾಗಜೀನ್ನಕ್ಕೀರನ್ನ ಪತ್ರಕರ್ತ ಆರ್ಆರ್ ಗೋಪಾಲ್ ನೇತೃತ್ವದಲ್ಲಿ 6 ಸುತ್ತುಗಳ ಮಾತುಕತೆಯ ಬಳಿಕ ಕೊನೆಗೂ 108 ದಿನಗಳ ಬಳಿಕ ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಬಿಡುಗಡೆ ಮಾಡಿದ್ದ.
ಈ ಸೆನ್ಸೇಷನಲ್ಕೇಸ್ನಲ್ಲಿ ವೀರಪ್ಪನ್ ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ ವೀರಪ್ಪನ್, ಸೇತುಕುಡಿ ಗೋವಿಂದನ್ ಹಾಗೂ ರಂಗಸಾಮಿ ವಿಚಾರಣೆ ವೇಳೆಯೇ ಸಾವನ್ನಪ್ಪಿದ್ದಾರೆ.
Comments are closed.