ಗದಗ: 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅನ್ಯಕೋಮಿನ ದಂಪತಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬುಧವಾರ ಶಿರಹಟ್ಟಿಯ ಬಸಾಪುರದಲ್ಲಿ ನಡೆದಿದೆ.
ಅಶ್ರಫ್ ಅಲಿ ದೊಡ್ಡಮನಿ (45) ಮತ್ತು ಸೋಮವ್ವ (38) ಎನ್ನುವ ದಂಪತಿಗಳು ಹತ್ಯೆಗೀಡಾದವರು. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ದಂಪತಿ ಮನೆಗೆ ಪೋಷಕರ ಮಳಿ ಮಾತನಾಡಲೆಂದು ಸೋಮವ್ವ ತವರಿಗೆ ಬಂದಿದ್ದರು.
ಈ ವೇಳೆ ಕುಪಿತನಾದ ಸೋಮವ್ವ ಸಹೋದರ ದೇವಪ್ಪ ಹೊಟ್ಟಿ ಮಾರಕಾಯುಧಗಳಿಂದ ಇಬ್ಬರನ್ನು ಕೊಚ್ಚಿ ಕೊಲೆಗೈದಿದ್ದಾನೆ. ಕೃತ್ಯ ಎಸಗಿದ ಬಳಿಕ ಶಿರಹಟ್ಟಿ ಪೊಲೀಸರಿಗೆ ಶರಣಾಗಿದ್ದಾನೆ.
Comments are closed.