ಬೆಂಗಳೂರು: ಅಳ್ಳಾಲ ಸಂದ್ರದ ಕಾಂಗ್ರೆಸ್ ಯುವ ನಾಯಕ ಅರುಣ್ ಹತ್ಯೆಗೈದಿದ್ದ ಆರೋಪಿಗಳಿಬ್ಬರ ಮೇಲೆ ಪೊಲೀಸ್ ಫೈರಿಂಗ್ ನಡೆದ ಘಟನೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದೊಡ್ಡಜಾಲ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಆರೋಪಿಗಳಾದ ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೇಗೌಡನ ಇರುವಿಕೆಯನ್ನು ಖಚಿತವಾಗಿ ತಿಳಿದಿದ್ದ ವಿದ್ಯಾರಣ್ಯ ಪುರ ಮತ್ತು ಯಲಹಂಕ ಪೊಲೀಸರು ಕಾರ್ಯಾಚರಣೆಗಿಳಿದ್ದರು.
ಈ ವೇಳೆ ಪೊಲೀಸರ ಮೇಲೆ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಇಬ್ಬರ ಕಾಲಿಗೆ ಗುಂಡು ತಗುಲಿ ಸ್ಥಳದಲ್ಲಿ ಕುಸಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಲಹಂಕ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್‌ಕುಮಾರ್ (27) ಅವರನ್ನು ಅಲ್ಲಾಳಸಂದ್ರದ ಸಮೀಪ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಕುರಿತು ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಅರುಣ್ ಕುಮಾರ್ ಸಂಬಂಧಿ ಅಭಿಷೇಕ್ ನೀಡಿದ ಮಾಹಿತಿ ಆಧರಿಸಿ ವಿಶೇಷ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವ ಹಾರ ನಡೆಸುತ್ತಿದ್ದ ಅರುಣ್, ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು.
ಫೈನಾನ್ಸ್ ವ್ಯವಹಾರಕ್ಕೆ ಸಂಬಂಧಿಸಿ ಅರುಣ್‌ನನ್ನು ಮನೋಜ್ ಮತ್ತು ಮಂಜೇಗೌಡ ಕೊಲೆಗೈದಿದ್ದರು ಎಂದು ಹೇಳಲಾಗಿದೆ.
Comments are closed.