ಕರ್ನಾಟಕ

ಲಕ್ಷ್ಮೀ ಹೆಬ್ಬಾಳ್ಕರ್​ ಕೆಳಗಿಳಿಸಲು ತೆರೆಮರೆಯ ಕಸರತ್ತು!

Pinterest LinkedIn Tumblr


ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಬೆಳಗಾವಿ ರಾಜಕರಣ ತಾರಕಕ್ಕೇರಿ ಜಾರಕಿಹೊಳಿ ಬ್ರದರ್ಸ್ ಹೆಬ್ಬಾಳ್ಕರ್​ ವಿರುದ್ಧ ತಿರುಗಿ ಬಿದ್ದು ಹೈರಾಣಾಗಿಸಿದ್ದರು. ಆದರೀಗ ಶಾಸಕಿ , ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್​ರವರಿಗೆ ಸದ್ಯದಲ್ಲೇ ಮತ್ತೂಂದು ಶಾಕ್ ಕಾದಿದೆ. ಪ್ರತಿಷ್ಠಿತ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯ ಹುದ್ದೆ ಬೇರೊಬ್ಬ ಮಹಿಳೇಯ ಪಾಲಾಗುವುದು ಬಹುತೇಕ ಖಚಿತವಾಗಿದೆ. ಸದ್ಯ ಲಕ್ಷ್ಮೀ ಹೆಬ್ಬಾಳಕರ್ ಶಾಸಕಿಯಾಗಿದ್ದಾರೆ ಹಾಗಾಗಿ ರಾಜ್ಯ ಸುತ್ತಿ ಸಂಘಟನೆ ಮಾಡುವುದು ಕಷ್ಟ. ಇದು ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಸುಶ್ಮಿತಾ ದೇವ್ ಅಭಿಪ್ರಾಯ.

ಆದರೆ ಇತ್ತೀಚೆಗೆ ಬೆಳಗಾವಿ ರಾಜಕಾರಣ ವಿಚಾರಕ್ಕಾದ ವಿವಾದವೂ ಹೆಬ್ಬಾಳಕರ್ ಬದಲಾಯಿಸಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇದೀಗ ಸುಶ್ಮಿತಾ ದೇವ್ ರಾಜ್ಯ ಮಹಿಳಾ ಕಾಂಗ್ರೆಸ್ ಹುದ್ದೆಗೆ ನಾಲ್ವರು ಮಹಿಳೆಯರ ಹೆಸರನ್ನು ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಸುಶ್ಮಿತಾ ದೇವ್ ಲಿಸ್ಟ್ ನಲ್ಲಿ ಇರೋ ಮಹಿಳಾ ನಾಯಕಿಯರು ಕೂಡ ತಮ್ಮದೇ ಆದ ಪ್ರಭಾವವನ್ನು ಬೀರುತ್ತಿದ್ದಾರಂತೆ.

ಮಹಿಳಾ ಕಾಂಗ್ರೆಸ್ ಹುದ್ದೆಗೆ ನಾಲ್ವರು ಮಹಿಳೆಯರಿಂದ ಲಾಭಿ

ಹೊಸಕೋಟೆಯ ಕಮಲಾಕ್ಷಿ ರಾಜಣ್ಣ ಎಸ್.ಸಿ ಕೋಟಾದಡಿ ಲಾಭಿ. ಕಮಲಾಕ್ಷಿ ರಾಜಣ್ಣಗೆ ವೀರಪ್ಪ ಮೊಯಿಲಿ, ಪರಮೇಶ್ವರ್ ಶಿಫಾರಸು.
ಪುಷ್ಪ ಅಮರನಾಥ್ ಮೈಸೂರು- ಒಬಿಸಿ ಕೋಟಾ. ಪುಷ್ಪ ಅಮರನಾಥ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಧೃವನಾರಾಯಣ ಬೆಂಬಲ.
ಗೀತಾ ರಾಜಣ್ಣ, ತುಮಕೂರು- ಒಕ್ಕಲಿಗ ಕೋಟಾ. ಗೀತಾ ರಾಜಣ್ಣರವರಿಗೆ , ಪರಮೇಶ್ವರ್​ ಹಾಗೂ ಡಿಕೆಶಿ ಕೃಪಾಕಟಾಕ್ಷ.
ನಾಗಲಕ್ಷ್ಮೀ ಚೌಧರಿ- ಕುರುಬ ಕೋಟಾ, ನಾಗಲಕ್ಷ್ಮೀ ಚೌಧರಿ ಪರ ಒಳಗೊಳಗೆ ಸಿದ್ದರಾಮಯ್ಯ ಲಾಭಿ

ಒಟ್ಟಿನಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಹುದ್ದೆಯ ಅವಧಿ ಮುಗಿದು ಮೂರು ತಿಂಗಳಾಗಿದೆ. ಆದರೂ ಮತ್ತೆ ಮೂರು ವರ್ಷ ತಾನೇ ಮುಂದುವರೆಯಲು ಕಸರತ್ತು ನಡೆಸಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಕೆಲ ದಿನಗಳ ಹಿಂದೆ ಆಯ್ದ ಮಹಿಳಾ ಕಾಂಗ್ರೆಸ್ ನಾಯಕಿಯರ ಸಭೆ ನಡೆಸಿದ್ದರು. ಸಭೆಯಲ್ಲಿ ನಾನಿನ್ನು ಬದುಕಿದ್ದೇನೆ. ಯಾರೂ ಮಹಿಳಾ ಕಾಂಗ್ರೆಸ್ ಹುದ್ದೆಗೆ ಅರ್ಜಿ ಹಾಕಬಾರದು ಎಂದು ಡಿಕೆಶಿ ಶೈಲಿಯಲ್ಲೇ ಹೇಳಿದ್ದರು. ಆದರೆ ರಾಷ್ಟ್ರೀಯ ಅಧ್ಯಕ್ಷೆ ಸುಶ್ಮಿತಾ ದೇವ್, ಲಕ್ಷ್ಮೀ ಹೆಬ್ಬಾಳಕರ್​ರನ್ನು ಮಹಿಳಾ ಕಾಂಗ್ರೆಸ್ ಹುದ್ದೆಯಿಂದ ಕೆಳಗಿಳಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಹಾಗಾಗಿ ನಾಲ್ವರು ಮಹಿಳೆಯರ ಹೆಸರನ್ನು ಪಡೆದಿದ್ದಾರೆ. ನಾಲ್ವರೂ ಕೂಡ ಅಧ್ಯಕ್ಷ ಹುದ್ದೆಗೆ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಕೊನೆಗೆ ಸುಶ್ಮಿತಾ ದೇವ್ ಯಾರಿಗೆ ಒಲಿಯುತ್ತಾರೆ ಎನ್ನುವುದು ಸದ್ಯದ ಕುತೂಹಲ.

Comments are closed.