ಬೆಂಗಳೂರು: ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಕಳೆದೆಂಟುದಿನಗಳಿಂದ ಜೈಲಿನಲ್ಲಿದ್ದ ನಟ ದುನಿಯಾ ವಿಜಯ್ ಅವರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದೆ.
ಜಾಮೀನು ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಜಾಮೀನು ನೀಡಿ ಆದೇಶಿಸಿದ್ದಾರೆ.
1 ಲಕ್ಷ ಬಾಂಡ್, ಎಚ್ಚರಿಕೆ..!
1 ಲಕ್ಷ ರುಪಾಯಿ ಬಾಂಡ್, ಇಬ್ಬರು ಜಾಮೀನು ಶ್ಯೂರಿಟಿ ನೀಡಿದ ಹಿನ್ನೆಲೆ ಜಾಮೀನು ನೀಡಲಾಗಿದೆ. ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ತನಿಕಾಧಿಕಾರಿಗಳ ತನಿಖೆಗೆ ಪೂರ್ಣ ಸಹಕರಿಸುವಂತೆ ಮತ್ತು ಸಾಕ್ಷಿಗಳ ಮೇಲೆ ಯಾವುದೇ ರೀತಿ ಪ್ರಭಾವ ಬೀರದಂತೆ ಎಚ್ಚರಿಸಲಾಗಿದೆ.
ರೋಲ್ ಮಾಡೆಲ್ ಆಗಿರಬೇಕು..!
ಈ ಬಾರಿ ಜಾಮೀನು ನೀಡಿದ್ದೇನೆ. ನಾಯಕ ಆದವರು ಸಮಾಜಕ್ಕೆ ರೋಲ್ ಮಾಡೆಲ್ ಆಗಿರಬೇಕು. ಇನ್ನು ಮುಂದೆ ಹೀಗೆ ವರ್ತಿಸದಿರಿ, ವಿಜಯ್ ಪರ ವಕೀಲರಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ಇಂದು ಬಿಡುಗಡೆ ಸಾಧ್ಯತೆ?
ಸದ್ಯ ದುನಿಯಾ ವಿಜಯ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇಂದು ಸಂಜೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ನಾಳೆ ರಜೆ ಇರುವ ಕಾರಣ ವಿಜಿ ಬಿಡುಗಡೆಗೆ ವಕೀಲರು ಹಾಗೂ ಸ್ನೇಹಿತರು ಹರಸಾಹಸಪಡುತ್ತಿದ್ದಾರೆ.
Comments are closed.