ಬೆಂಗಳೂರು/ಪಾಟ್ನಾ: ಶಾಂತಿಧೂತ, ಬೌದ್ಧ ಧರ್ಮಗುರು ದಲೈಲಾಮಾ ಅವರ ಹತ್ಯೆಗೆ ರಾಮನಗರದಲ್ಲಿ ಮೋಸ್ಟ್ ವಾಂಟೆಡ್ ಬಾಂಗ್ಲಾ ಉಗ್ರರು ಸಂಚು ರೂಪಿಸಿರುವ ಸ್ಫೋಟಕ ಮಾಹಿತಿ ಎನ್ ಐಎ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿರುವುದು ಜಾರ್ಜ್ ಶೀಟ್ ನಲ್ಲಿ ದಾಖಲಿಸಿದೆ.
ಬಾಂಬ್ ಸ್ಫೋಟಿಸಿ ದಲೈಲಾಮಾ ಅವರನ್ನು 19-01-2018ರಂದು ಹತ್ಯೆ ಮಾಡಲು ಜೆಎಂಬಿ ಉಗ್ರರು ಸಂಚು ರೂಪಿಸಿದ್ದರು. ಈ ಬಗ್ಗೆ ಬಿಹಾರದ ಬೋಧಗಯಾ ಸ್ಫೋಟದ ಪ್ರಮುಖ ಆರೋಪಿ ಮುನೀರ್ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದ. ಈತ ಕರ್ನಾಟಕದ ರಾಮನಗರದಲ್ಲಿ ವಾಸವಾಗಿದ್ದ. ಖಚಿತ ಮಾಹಿತಿ ಮೇರೆಗೆ ಎನ್ ಐಎ ಅಧಿಕಾರಿಗಳು ಆತನನ್ನು ಬಂಧಿಸಿದ್ದರು.
ಎನ್ ಐಎ ವಿಚಾರಣೆ ವೇಳೆ, ಜೆಎಂಬಿ(ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್) ಉಗ್ರರು ದಲೈಲಾಮಾ ಅವರನ್ನು ಹತ್ಯೆಗೈದರೆ ಮ್ಯಾನ್ಮಾರ್ ಗೆ ಭಯ ಹುಟ್ಟುತ್ತೆ ಎಂಬುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.
ಪಾಟ್ನಾ ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಎನ್ ಐಎ ಅಧಿಕಾರಿಗಳು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತನಿಖೆಯ ವಿವರಗಳನ್ನು ದಾಖಲಿಸಿದ್ದಾರೆ. ಆ ಪ್ರಕಾರ ಕರ್ನಾಟಕದಲ್ಲಿಯೇ ವಾಸವಾಗಿದ್ದು ದಲೈಲಾಮಾ ಹತ್ಯೆಗೆ ನಡೆಸಿದ್ದ ಸಂಚನ್ನು ಎನ್ ಐಎ ವಿಫಲಗೊಳಿಸಿದೆ.
Comments are closed.