ಕರ್ನಾಟಕ

ದಸರಾ 2018; ಖಾಸಗಿ ದರ್ಬಾರ್​ ಆಚರಣೆ ಹಿನ್ನೆಲೆ ಅರಮನೆಗೆ ಪ್ರವೇಶ ನಿಷೇಧ

Pinterest LinkedIn Tumblr


ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಅರಮನೆಗೆ ಆಗಮಿಸಿರುವ ಗಜಪಡೆ ಭಾರ ಹೊರುವ ಮೂಲಕ ತಾಲೀಮು ನಡೆಸುತ್ತಿವೆ. ಇನ್ನೂ ಅನೇಕ ಸಿದ್ದತೆಗಳು ಭರದಿಂದ ನಡೆಯುತ್ತಿದ್ದು, ಈಗ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್​ ಆಚರಣೆ ಹಿನ್ನೆಲೆ ಕೆಲವು ದಿನ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧವೇರಿ ಆದೇಶ ಹೊರಡಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಐದು ದಿನ ಪ್ರವೇಶ ಸಮಯ ಹಾಗೂ ನಿರ್ಬಂಧ ವ್ಯತ್ಯಾಸವಾಗಲಿದೆ.

ಅಕ್ಟೋಬರ್ 4 ರಂದು ಬೆ.10ರಿಂದ ಮ.1ಗಂಟೆಯವರೆಗೆ ಅರಮನೆಯ ಪ್ರವೇಶ ನಿಷೇಧ. (ಅರಮನೆ ಒಳಗೆ ರತ್ನಖಚಿತ ಸಿಂಹಾಸನದ ಜೊಡಣೆ ಇರಲಿದೆ)

ಅಕ್ಟೋಬರ್ 10ರಂದು ಬೆ.10ರಿಂದ 2.30ರವರೆ ಒಳ ಆವರಣ ನಿಷೇಧ ಹೊರ ಆವರಣ ಪ್ರವೇಶಾವಕಾಶ. (ಅಂದು ಖಾಸಗಿ ದರ್ಬಾರ್ ಆರಂಭ ಯದುವೀರ್ ಸಿಂಹಾಸನಾರೋಹಣ ಕಾರ್ಯಕ್ರಮ

ಅಕ್ಟೋಬರ್ 18ರಂದು ಬೆ.10 ರಿಂದ 1.30ರವರೆಗೆ ಅರಮನೆಯ ಒಳ ಮತ್ತು ಹೊರ ಆವರಣ ನಿಷೇಧ. (ಅರಮನೆಯ ಆವರಣದಲ್ಲಿ ಆಯುಧಪೂಜೆ ಹಾಗೂ ಜಟ್ಟಿಕಾಳಗ)

ಅಕ್ಟೋಬರ್ 19 ರಂದು ಇಡೀ ದಿನ ಪ್ರವೇಶ ನಿರ್ಬಂಧ ಹಾಗೂ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ. (ಜಂಬೂಸವಾರಿ)

ನವೆಂಬರ್ 2 ರಂದು ಬೆ.10 ರಿಂದ ಮ.1ರವರೆಗಡ ಅರಮನೆಯ ಒಳ ಹಾಗೂ ಹೊರ ಆವರಣ ಪ್ರವೇಶ ನಿಷೇಧ.‌ (ಸಿಂಹಾಸನ ವಿಸರ್ಜನೆ)

ಮೈಸೂರು ಅರಮನೆ ಮಂಡಳಿಯಿಂದ ಅರಮನೆ ಪ್ರವೇಶ ನಿಷೇಧ ಹಾಗೂ ಸಮಯ ಬದಲಾವಣೆ ಕುರಿತು ಮಾಹಿತಿ ಪಡೆಯಲಾಗಿದೆ.

Comments are closed.