ಕರ್ನಾಟಕ

5 ರೂ. ನಾಣ್ಯ ನುಂಗಿದ ಬಾಲಕ

Pinterest LinkedIn Tumblr


ಹಲಗೂರು: ಗ್ರಾಮದ ಅಕ್ಮಲ್ ಮತ್ತು ಶಾಜಿಯ ದಂಪತಿ ಪುತ್ರ ಮಹಮ್ಮದ್ ಮಂಗಳವಾರ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯವನ್ನು ನುಂಗಿದ್ದು, ಭಯಭೀತರಾದ ಪಾಲಕರು ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ತಪಾಸಣೆ ನಡೆಸಿದ ಖಾಸಗಿ ಕ್ಲಿನಿಕ್ ಡಾ.ಸಿದ್ದರಾಜು, ಎಕ್ಸ್ ರೇ ವರದಿ ಪ್ರಕಾರ ಬಾಲಕನ ಕರುಳಿನ ಬಳಿ ನಾಣ್ಯ ಕಂಡುಬಂದಿದ್ದು, ಇದರಿಂದ ಏನೂ ತೊಂದರೆ ಆಗುವುದಿಲ್ಲ. ಮಲದೊಂದಿಗೆ ಹೊರಬರುತ್ತದೆ ಎಂದು ತಿಳಿಸಿದರು.

ಇಂತಹ ಸಣ್ಣ ವಸ್ತುಗಳು ಒಂದು ವೇಳೆ ಶ್ವಾಸಕೋಶದಲ್ಲಿ ಸಿಕ್ಕಿಕೊಂಡರೆ ಪ್ರಾಣಕ್ಕೆ ಆಪಾಯವಾಗುತ್ತದೆ. ಆದ್ದರಿಂದ ಮಕ್ಕಳನ್ನು ಇಂತಹ ವಸ್ತುಗಳಿಂದ ದೂರ ಇರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Comments are closed.