ಕರ್ನಾಟಕ

16 ವರ್ಷದೊಳಗಿನ ಬಾಲಕರ ಗ್ಯಾಂಗ್‌ ಕಟ್ಟಿ ದರೋಡೆ ನಡೆಸುತ್ತಿದ್ದ ದರೋಡೆ ಗ್ಯಾಂಗ್‌ ಲೀಡರ್‌ ಬಂಧನ

Pinterest LinkedIn Tumblr


ಬೆಂಗಳೂರು: 16 ವರ್ಷದೊಳಗಿನ ಬಾಲಕರ ಗ್ಯಾಂಗ್‌ ಕಟ್ಟಿ ದರೋಡೆ ನಡೆಸುತ್ತಿದ್ದ 18 ವರ್ಷದ ಗ್ಯಾಂಗ್‌ ಲೀಡರ್‌ನನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸೂರು ರಸ್ತೆಯ ಗಾರೆಬಾವಿಪಾಳ್ಯದ ನಿವಾಸಿ ಉದಯ್‌ ಜಿ ಕಲಾಕಾರ್‌ ಬಂಧಿತ ಆರೋಪಿ. ಈತ ತನ್ನ ಜತೆ ನಾಲ್ವರು ಬಾಲಕರ ಗ್ಯಾಂಗ್‌ ಕಟ್ಟಿದ್ದು ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್‌ ಒಂಟಿಯಾಗಿ ಓಡಾಡುವ ಸಾರ್ವಜನಿಕರ ಮೇಲೆ ಎರಗಿ, ದರೋಡೆ ಮಾಡುತ್ತಿತ್ತು. ಜತೆಗೆ ದ್ವಿಚಕ್ರ ವಾಹನ ಕಳ್ಳತನ, ದೇವಸ್ಥಾನಗಳ ಹುಂಡಿ ಕಳ್ಳತನವನ್ನೂ ನಡೆಸುತ್ತಿದ್ದರು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ರಸ್ತೆ ಬದಿ ಹಾಗೂ ಮನೆ ಮುಂದೆ ನಿಂತಿರುವ ದ್ವಿಚಕ್ರ ವಾಹನಗಳ ಕಳ್ಳತನ ಮಾಡುವುದರಲ್ಲಿ ತಂಡ ಕಾರ್ಯನಿರತವಾಗಿತ್ತು. ಕದ್ದ ವಾಹನಗಳಲ್ಲೇ ನಿರ್ಜನ ಪ್ರದೇಶದಲ್ಲಿಓಡಾಡುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ದರೋಡೆ ಮಾಡುತ್ತಿತ್ತು. ಒಂಟಿಯಾಗಿ ಓಡಾಡುವವರು, ದ್ವಿಕಚ್ರ ವಾಹನದಲ್ಲಿಹೋಗುವವರನ್ನೇ ತಂಡ ನಿಗಾ ಇರಿಸುತ್ತಿತ್ತು. ಆರೋಪಿಯ ಬಂಧನದಿಂದ 14 ಪ್ರಕರಣಗಳನ್ನುಭೇದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲಘಟ್ಟಪುರ ಪೊಲೀಸ್‌ ಠಾಣೆ, ಪೀಣ್ಯ ಮತ್ತು ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿತಲಾ 2, ಬೇಗೂರು ಠಾಣೆ, ಪರಪ್ಪನ ಅಗ್ರಹಾರ, ಹೆಚ್‌.ಎಸ್‌.ಆರ್‌.ಲೇಔಟ್‌, ಅತ್ತಿಬೆಲೆ, ಆನೇಕಲ್‌, ಹಾಸನ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿತಲಾ ಒಂದೊಂದು ಪ್ರಕರಣಗಳನ್ನು ಈ ಗ್ಯಾಂಗ್‌ ನಡೆಸಿತ್ತು. ಬಂಧಿತ ಆರೋಪಿಯಿಂದ 11 ಲಕ್ಷ ರೂ ಮೌಲ್ಯದ ದ್ವಿಚಕ್ರ ವಾಹನಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.