ಕರ್ನಾಟಕ

ಕಲಬುರ್ಗಿಯಲ್ಲಿ ನಿಷೇಧಿತ ಆನ್ ಲೈನ್ ಗೇಮ್ ಬ್ಲೂ ವೇಲ್’ಗೆ ಇನ್ನೊಬ್ಬ 12ರ ಬಾಲಕ ಬಲಿ

Pinterest LinkedIn Tumblr

ಕಲಬುರ್ಗಿ: ನಿಷೇಧಿತ ಆನ್ ಲೈನ್ ಗೇಮ್ ಬ್ಲೂ ವೇಲ್ ಇನ್ನೊಬ್ಬ ಬಾಲಕನನ್ನು ಬಲಿಪಡೆದಿದೆ. ಕಲಬುರ್ಗಿಯ ಮಹಾಲಕ್ಷ್ಮಿ ಲೇಔಟ್ ನಲ್ಲಿ 12ರ ಬಾಲಕನೊಬ್ಬ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೇಂಟ್​ ಮೇರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಸಮರ್ಥ್(12) ಸಾವಿಗೀಡಾದ ದುರ್ದೈವಿ. ಈತ ಕೆಲ ದಿನಗಳಿಂದ ಡೆಡ್ಲಿ ಗೇಮ್ ಆಗಿರುವ ಬ್ಲೂ ವೇಲ್ ಆಟವಾಡುತ್ತಿದ್ದ. ಶಾಲೆ ವಿದ್ಯಾಭ್ಯಾಸ ಬಿಟ್ಟು ಮಾನಸಿಕವಾಗಿ ಕುಗ್ಗಿದವನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ.

ಗೇಮ್ ನ ಟಾಸ್ಕ್ ನಂತೆ ಸೋಮವಾರ ರಾತ್ರಿ ಸುಮಾರು 7 ಗಂಟೆಗೆ ಸಮರ್ಥ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದಕ್ಕೆ ಎರಡು-ಮೂರು ದಿನಗಳಿಂದ ಆತ ಬ್ಲೂ ವೇಲ್ ಗೇಮ್ ಆಡುತ್ತಿದ್ದು ಒಮ್ಮೆ ತನ್ನೆರಡೂ ಕೈಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದ. ಆಗ ಅವನ ಪೋಷಕರು ಈ ಕುರಿತಂತೆ ಅವನನ್ನು ಪ್ರಶ್ನಿಸಿದಾಗ ಇದು ಶಾಲಾ ಚಟುವಟಿಕೆ, ಇಲ್ಲಿ ಅಭ್ಯಾಸ ನಡೆಸಿದ್ದೇನೆ ಎಂದು ಸುಳ್ಳು ಹೇಳಿದ್ದ. ಆದರೆ ಪೋಷಕರು ಮಗು ಸುಳ್ಳು ಹೇಳಿದ್ದನ್ನೇ ನಿಜವೆಂದು ನಂಬಿ ಆತನ ಕುರಿತು ನಿರ್ಲಕ್ಷ ತಾಳಿದ್ದರು.

ಸೋಮವಾರ ತನಗೆ ಪಾನಿಪೂರಿ ಬೇಕೆಂದು ತಾಯಿಯೊಬ್ಬರೇ ಮನೆಯಲ್ಲಿದ್ದ ವೇಳೆ ಹಠ ಹಿಡಿದಿದ್ದಾನೆ. ಮಗನ ಹಠಕ್ಕೆ ಸೋತು ತಾಯಿ ಪಾನಿಪೂರಿ ತೆಗೆದುಕೊಂಡು ಬರಲು ಹೊರ ಹೋಗಿದ್ದಾಗ ಸಮರ್ಥ್ ಆಟವಾಡುವ ಅಂತಿಮ ಟಾಸ್ಕ್ ನಂತೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಕುರಿತು ಕಲಬುರ್ಗಿ ರಾಘವೇಂದ್ರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.