ಬೆಂಗಳೂರು: ಉಪಚುನಾವಣಾ ಸಮರಕ್ಕೆ ಸಿದ್ಧವಾಗಿರುವ ಬಿಜೆಪಿಗೆ ಈಗ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ತಲೆ ಬಿಸಿಯಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿರದೆ ಇರುವುದು ಕೂಡ ಇದಕ್ಕೆ ಕಾರಣವಾಗಿದೆ. ಇದಕ್ಕಾಗಿ ಬಿಜೆಪಿ ಅಪರೇಷನ್ ಕಮಲಕ್ಕೆ ಮುಂದಾಗಿದೆ.
ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರವಾಗಿದೆ. ಇಲ್ಲಿ ಜೆಡಿಎಸ್ನಿಂದ ಅನಿತಾ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಲು ಪಕ್ಷ ನಿರ್ಧರಿಸಿದ್ದರೆ, ಇತ್ತ ಕಾಂಗ್ರೆಸ್ನಲ್ಲಿ ಸ್ಥಳೀಯ ಮುಖಂಡ ಇಕ್ಬಾಲ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ, ಇಕ್ಬಾಲ್ ಅವರನ್ನೇ ಬಿಜೆಪಿಗೆ ಸೆಳೆದು, ಪಕ್ಷದ ಅಭ್ಯರ್ಥಿಯನ್ನಾಗಿ ಮಾಡುವ ಉಪಾಯ ಮಾಡಿದೆ. ಇದರ ಬೆನ್ನಲ್ಲೆ ಈಗ ಕಾಂಗ್ರೆಸ್ ಮುಖಂಡ ಲಿಂಗಪ್ಪ ಅವರ ಮಗ ಬಿಜೆಪಿ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ರಾಮನಗರ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಮಗ ಚಂದ್ರಶೇಖರ್ ಅವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಸಿ.ಪಿ ಯೋಗೀಶ್ವರ್ ಅವರನ್ನು ಕಮಲ ಪಾಳಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಯೋಗೇಶ್ವರ್ ಜೊತೆಗೆ ಆಗಮಿಸಿದ ಚಂದ್ರಶೇಖರ್, ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾದರು. ಬಳಿಕ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ ಜೆಡಿಎಸ್, ಕಾಂಗ್ರೆಸ್ ಸಂಘಟಿತ ಅಭ್ಯರ್ಥಿ ಎದುರು ಬಿಜೆಪಿಯಿಂದ ಜಿಲ್ಲಾಧ್ಯಕ್ಷ ರುದ್ರೇಶ್ರನ್ನು ನಿಲ್ಲಿಸುವ ಸಾಧ್ಯತೆಯಿದೆ.
2 ವಿಧಾನಸಭೆ, 3 ಲೋಕಸಭೆಗೆ ಉಪಚುನಾವಣೆ; ಮೂರು ಪಕ್ಷಗಳಲ್ಲೂ ಮುಗಿಯದ ಅಭ್ಯರ್ಥಿ ಆಯ್ಕೆ ಕಸರತ್ತು
ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮೊರೆ:
ಇಕ್ಬಾಲ್ ಹುಸೇನ್ ಅವರನ್ನು ಚುನಾವಣಾ ಕಣಕ್ಕೆ ಇಳಿಸದಿದ್ದರೆ, ಇದು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಮಾತು ಕೂಡ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿ ಬಂದಿದೆ. ಅಲ್ಲದೇ ಇಕ್ಬಾಲ್ ಟಿಕೆಟ್ ಕೈ ತಪ್ಪಿದರೆ, ಸ್ವತಂತ್ರವಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತು ಕೂಡ ಕಾಂಗ್ರೆಸ್ ಪಾಳಯದಿಂದ ಕೇಳಿಬಂದಿದೆ.
ಈ ಬೆಳವಣಿಗೆ ಗಮನಿಸಿ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರಿಗೆ ಗಾಳ ಹಾಕಲು ತಯಾರಿ ನಡೆಸಿದೆ. ಇನ್ನು ಇಕ್ಬಾಲ್ ಅವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಈ ಹಿನ್ನೆಲೆಯಲ್ಲಿ ಇದು ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.
ಇಕ್ಬಾಲ್ ಹುಸೇನ್ ಅವರನ್ನು ಒಂದು ವೇಳೆ ಪಕ್ಷಕ್ಕೆ ಸೆಳೆಯುವಲ್ಲಿ ವಿಫಲವಾದರೆ ಚಂದ್ರಶೇಖರ್ ಅವರನ್ನು ಕಣಕ್ಕೆ ಇಳಿಸಲು ಕೂಡ ಪಕ್ಷ ಚಿಂತನೆ ನಡೆಸಿದೆ. ರಾಮನಗರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಿ.ಪಿ ಯೋಗೇಶ್ವರ್ ಅವರನ್ನು ಕಣಕ್ಕೆ ಇಳಿಸುವ ಕುರಿತು ಬಿಜೆಪಿ ತಯಾರಿ ನಡೆಸಿದ್ದು, ರುದ್ರೇಶ್ ಹೆಸರು ಕೂಡ ಕಮಲ ಪಾಳಯದಲ್ಲಿ ಕೇಳಿ ಬಂದಿದೆ. ರಾಮನಗರ ಅಭ್ಯರ್ಥಿ ಆಯ್ಕೆ ಬಗ್ಗೆ ಇಂದು ಬೆಳಗ್ಗೆ ಇಂದ ಬಿಎಸ್ ಯಡಿಯೂರಪ್ಪ ಮನೆಯಲ್ಲಿ ಚರ್ಚೆಯಾಗಿದ್ದು, ಯಾರ ಹೆಸರು ಅಂತಿಮವಾಗಿಲ್ಲ.
ರಾಮನಗರದಲ್ಲಿ ಈಗ ಜೆಡಿಎಸ್ ಪರ ವಾತಾವರಣವಿಲ್ಲ. ಅನಿತಾ ಕುಮಾರಸ್ವಾಮಿಯವರ ಪರ ಒಲವಿಲ್ಲ.ಅಲ್ಲದೇ ಕಾಂಗ್ರೆಸ್ ನಲ್ಲಿ ಒಡಕುಂಟಾಗಿದೆ. ಹಾಗಾಗಿ ರುದ್ರೇಶ್ ಅಥವಾ ಸಿ.ಪಿ. ಯೋಗೀಶ್ವರ್ ಗೆ ಟಿಕೆಟ್ ಕೊಟ್ರೆ ಬಿಜೆಪಿ ಗೆಲುವು ಸುಲಭವಾಗುತ್ತದೆ ಎಂದು ಯಡಿಯೂರಪ್ಪ ನವರಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
Comments are closed.