ಕರ್ನಾಟಕ

ರಾಜ್ಯದ ಹಲವು ಕಡೆ ಸಿಡಿಲು ಬಡಿದು 7 ಜನ ಸಾವು: 18ವರೆಗೆ ಮಳೆ

Pinterest LinkedIn Tumblr


ಬೆಂಗಳೂರು: ಮುಂಗಾರು ಹಿಂದೆ ಸರಿಯುವ ಹೊತ್ತಿನಲ್ಲೇ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಈ ನಡುವೆ, ಸೋಮವಾರ ರಾಜ್ಯದ ಹಲವೆಡೆ ಸಿಡಿಲಾಘಾತದಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ತಾಯಿ-ಮಗಳು, ರೈತರು ಸೇರಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಹಳ್ಳಿ ತಾಂಡಾದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಮತ್ತು ಮಗಳು ಸಿಡಿಲು ಬಡಿದು ಮೃತಪಟ್ಟರೆ, ಜಗಳೂರು ಬಳಿ ಹೊಲದಲ್ಲಿ ಜೋಳದ ತೆನೆ ಮುರಿಯುತ್ತಿದ್ದ ಮಹಿಳೆ ಕೂಡಾ ಮೃತಪಟ್ಟರು. ಕಲ್ಲೇನಹಳ್ಳಿಯಲ್ಲಿ ಮೆಕ್ಕೆಜೋಳ ತೆನೆಯನ್ನು ಟ್ರ್ಯಾಕ್ಟರ್‌ಗೆ ಲೋಡ್‌ ಮಾಡುತ್ತಿದ್ದಾಗ ರೈತರೊಬ್ಬರು ಸಿಡಿಲಿಗೆ ಬಲಿಯಾದರು. ಹಾವೇರಿ ಜಿಲ್ಲೆಯ ನರೇಗಲ್‌ನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಸವಣೂರು ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ಹತ್ತಿ ಬಿಡಿಸಿ ಮನೆಗೆ ಮರಳುತ್ತಿದ್ದ ಕೃಷಿಕನನ್ನು ಸಿಡಿಲು ಬಲಿ ಪಡೆದಿದೆ. ಸಿರವಾರದ ಬ್ಯಾಗವಾಟದಲ್ಲಿ ಮರದಡಿ ನಿಂತಿದ್ದ ರೈತರೊಬ್ಬರು ಸಿಡಿಲಾಘಾತಕ್ಕೆ ಒಳಗಾಗಿದ್ದಾರೆ. ಚಿತ್ರದುರ್ಗದ ಪರಶುರಾಂಪುರದಲ್ಲಿ ಎರಡು ಎತ್ತುಗಳು ಸತ್ತಿವೆ.

18ವರೆಗೆ ಮಳೆ

ಕರಾವಳಿಯ ಎಲ್ಲ ಕಡೆ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅ.18 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Comments are closed.