ಕರ್ನಾಟಕ

ಸಂಜನಾ, ಶೃತಿ ಹರಿಹರನ್ ಘಟನೆ ನಡೆದಾಗ ದೂರು ನೀಡಬೇಕಿತ್ತು: ಚಲನಚಿತ್ರ ಮಂಡಳಿ ಅಧ್ಯಕ್ಷ ಚೆನ್ನೇಗೌಡ

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮೀಟೂ ಶುರುವಾಗಿದ್ದು, ನಟಿ ಸಂಜನಾ ಹಾಗೂ ಶೃತಿ ಹರಿಹರನ್ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಟಿಯರಾದ ಸಂಜನಾ ಹಾಗೂ ಶೃತಿ ಹರಿಹರನ್ ಮಾಡಿರುವ ಆರೋಪಗಳಿಗೆ ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು ಫಿಲ್ಮಂ ಚೇಂಬರ್ ಅಧ್ಯಕ್ಷ ಚೆನ್ನೇಗೌಡ ಪ್ರತಿಕ್ರಿಯಿಸಿದ್ದಾರೆ.

ಶೃತಿ ಹರಿಹರನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಫಿಲ್ಮಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, “ಈ ಘಟನೆ ನಡೆದು ತುಂಬಾ ದಿನ ಆಗಿದೆ. ಈಗ ಈ ಘಟನೆ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ಘಟನೆ ನಡೆದಾಗಲೇ ಚಲನಚಿತ್ರ ಮಂಡಳಿಗೆ ದೂರು ನೀಡಬೇಕಿತ್ತು. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆಂಬುದು ನನಗೆ ಗೊತ್ತಿಲ್ಲ. ಅಂದೇ ಇಬ್ಬರು ಕುಳಿತು ಮಾತುಕತೆ ನಡೆಸಿ ಈ ಪ್ರಕರಣವನ್ನು ಬಗೆಹರಿಸಿಕೊಳ್ಳಬೇಕಿತ್ತು. ಫಿಲ್ಮಂ ಚೇಂಬರ್ ಗೆ ಬಂದು ಮಾತನಾಡಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮದ ಮೂಲಕ ಈ ರೀತಿ ಮಾತನಾಡುವುದು ಸರಿಯಲ್ಲ. ಇಲ್ಲಿವರೆಗೂ ದೂರು ಬಂದಿಲ್ಲ ದೂರು ಬಂದರೆ ಈ ಬಗ್ಗೆ ಮಾತನಾಡುತ್ತೇವೆ” ಎಂದು ಶೃತಿ ಹರಿಹರನ್ ಹಾಗು ಸಂಜನಾ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಶೃತಿ ಹರಿಹರನ್ ಆರೋಪಕ್ಕೆ ಅರ್ಜುನ್ ಸರ್ಜಾ ತಿರುಗೇಟು

ಅರ್ಜುನ್ ಸರ್ಜಾ ಅವರನ್ನು ನಾನು ಮೊದಲಿನಿಂದಲೂ ನೋಡಿದ್ದೇನೆ. ಅರ್ಜುನ್ ಸರ್ಜಾ ಮೇಲೆ ಇಲ್ಲಿಯವರೆಗೂ ಈ ರೀತಿಯ ಆರೋಪ ಎದುರಿಸಿಲ್ಲ. ಈ ರೀತಿ ಆರೋಪಗಳನ್ನು ಮಾಡಿ ಲೈಮ್ ಲೈಟ್ ಗೆ ಬರುವುದು ನಿಲ್ಲಬೇಕು ಎಂದು ಅರ್ಜುನ್ ಸರ್ಜಾ ಬಗ್ಗೆ ನಿರ್ಮಾಪಕ ಭಾ. ಮಾ ಹರೀಶ್ ಹೇಳಿದ್ದಾರೆ. ಇದನ್ನೂ ಓದಿ: ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇದ್ದ ಚಿತ್ರವನ್ನ ಯಾಕೆ ಮಾಡ್ಬೇಕು – ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಅತ್ತೆ ಕಿಡಿ

ಮೀಟೂ ಆರೋಪ ಎದುರಿಸುತ್ತಿರುವ ನಿರ್ದೇಶಕ ರವಿ ಶ್ರೀವತ್ಸಾ ಫಿಲಂ ಚೇಂಬರ್ ನಲ್ಲಿ ಮೀಟೂ ಆರೋಪದ ಬಗ್ಗೆ ಕುರಿತು ಚರ್ಚೆ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ನಟಿ ಸಂಜನ ನಿರ್ದೇಶಕ ರವಿ ಶ್ರೀವತ್ಸಾ ವಿರುದ್ಧ ಆರೋಪ ಮಾಡಿದರು. ಸದ್ಯ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಜೊತೆ ರವಿ ಶ್ರೀವತ್ಸಾ ಮಾತುಕತೆ ನಡೆಸುತ್ತಿದ್ದಾರೆ.

Comments are closed.