ಕರ್ನಾಟಕ

ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ ಡಿಕೆಶಿ ನಿಜ ಅಭಿಪ್ರಾಯ ಹೇಳಿದ್ದಾರೆ; ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ವಾಸ್ತವಿಕ ಸಂಗತಿ ಅರ್ಥಮಾಡಿಕೊಂಡು ಸಚಿವ ಡಿಕೆ ಶಿವಕುಮಾರ್​ ಅಭಿಪ್ರಾಯ ನೀಡಿದ್ದಾರೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಕಾಣಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಹಿಂದಿನ ಕಾಂಗ್ರೆಸ್​ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ತಪ್ಪು ಮಾಡಿತು ಎಂದು ಈಗಲಾದರೂ ಸಚಿವರಿಗೆ ಮನವರಿಕೆಯಾಗಿದೆ. ಅವರ ಹೇಳಿಕೆಯನ್ನು ನಾವು ಸ್ವಾಗತಿಸಬೇಕು. ಅದನ್ನು ಬಿಟ್ಟು ಟೀಕೆ, ಟಿಪ್ಪಣಿ ಸಲ್ಲದು ಎಂದರು.

ಡಿಕೆ ಶಿವಕುಮಾರ್​ ಹೇಳಿಕೆಗೆ ಅವರದೇ ಪಕ್ಷದ ನಾಯಕರು ಟೀಕೆಗಳು ವ್ಯಕ್ತಪಡಿಸುತ್ತಿದ್ದಾರೆ. ಅವರ ಹೇಳಿಕೆಗೆ ಬಗ್ಗೆ ವಿರೋಧ ವ್ಯಕ್ತಪಡಿಸುವುದು ಯಾರಿಗೂ ಶೋಭೆ ತರುವುದಿಲ್ಲ. ಅಲ್ಲದೇ, ಈ ವಿಷಯದಲ್ಲಿ ಶಿವಕುಮಾರ್​ ನಿಜ ಅರಿತು ಮಾತನಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ ಎಂದರು.

ಲಿಂಗಾಯತ ಮುಖಂಡ ಎಂದೇ ಬಿಂಬಿತವಾಗಿದ್ದ ಬಿಜೆಪಿ ನಾಯಕ ಬಿಎಸ್​ ಯಡಿಯೂರಪ್ಪ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸಿದ್ದರು.

ಆತ್ಮಸಾಕ್ಷಿಯಾಗಿ ಮಾತನಾಡಿದ್ದೇನೆ, ನನ್ನ ಹೇಳಿಕೆಗೆ ನಾನು ಬದ್ದ ; ಡಿ.ಕೆ.ಶಿವಕುಮಾರ್

ಯೂಟರ್ನ್​ ಹೊಡೆದ ಬಸವರಾಜ್​ ಹೊರಟ್ಟಿ

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಮತ್ತೆ ವಾದ ವಿವಾದಗಳು ಹುಟ್ಟಿಕೊಂಡಿದ್ದು, ಪಕ್ಷದ ಶಾಸಕರ ನಡುವೆ ಈಗ ಭಿನ್ನಭಿಪ್ರಾಯಗಳು ತಲೆದೂಗಿದೆ. ಇನ್ನು ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಸಮಿತಿ ಅಧ್ಯಕ್ಷ ರಾಗಿದ್ದ ಬಸವರಾಜ ಹೊರಟ್ಟಿ ನಿರಾಕರಿಸಿದ್ದಾರೆ.

ಈ ಹಿಂದೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮೈತ್ರಿ ಸರ್ಕಾರದ ಪರಿಷತ್​ ಸಭಾಪತಿ ಬಸವರಾಜ್​ ಹೊರಟ್ಟಿ, ಡಿಕೆಶಿ ಹೇಳಿಕೆಯಿಂದ ಹೋರಾಟಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಈ ಕುರಿತು ಈಗಾಗಲೇ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲಾಗಿದ್ದು, ಈ ವಿಚಾರ ಕೇಂದ್ರ ಸರ್ಕಾದ ಮುಂದೆ ಇದೆ.

ಈ ಸಮಯದಲ್ಲಿ ಈ ರೀತಿಯ ಹೇಳಿಕೆ ನೀಡಬಾರದಾಗಿತ್ತು. ನಾನು ಒಂದು ಸಮಯದಲ್ಲಿ ಮುಂಚೂಣಿಯಲ್ಲಿದ್ದೆ, ಈಗ ನಾನು ಮುಂಚೂಣಿ ವಹಿಸಿಕೊಂಡಿಲ್ಲ. ಈ ಕುರಿತು ಹೆಚ್ಚಿನ ವಿಷಯವಾಗಿ ವಿನಯ ಕುಲಕರ್ಣಿ ಮತ್ತು ಎಮ್.ಬಿ. ಪಾಟೀಲ್ ಅವರನ್ನು ಕೇಳಿ ಎಂದರು

Comments are closed.