ಮಡಿಕೇರಿ: ಬೇಟೆಗೆಂದು ತೆರಳಿದ ಯುವಕನೊಬ್ಬ ಗುಂಡೇಟಿನಿಂಡ ಸಾವನ್ನಪ್ಪಿರುವ ದಾರುಣ ಘಟನೆ ಮಡಿಕೇರಿಯ ಕಾಂಡನಕೊಲ್ಲಿ ಬಳಿ ನಡೆದಿದೆ.
ಭಾನುವಾರ ರಾತ್ರಿ ನಡೆದಿರುವ ಘಟನೆಯಲ್ಲಿ ಎಮ್ಮೆತಾಳು ಗ್ರಾಮದ ರಂಜಿತ್(31) ಸಾವನ್ನಪ್ಪಿದ್ದಾರೆ.ಇದೇ ಗ್ರಾಮದ ದಿನೇಶ್ ಎನ್ನುವಾತ ಹಾರಿಸಿದ ಗುಂಡಿಗೆ ರಂಜಿತ್ ಬಲಿಯಾಗಿದ್ದಾರೆ.
ಘಟನೆ ವಿವರ
ರಂಜಿತ್ ಹಾಗೂ ದಿನೇಶ್ ತಾವು ಬೇರೆ ಬೇರೆಯಾಗಿ ಬೇಟೆಗಾಗಿ ಕಾಡಿಗೆ ತೆರಳಿದ್ದಾರೆ./ಆಗ ರಂಜಿತ್ ಕಾಡಿನಲ್ಲಿ ನಡೆದಾಡುತ್ತಿರುವ ಸದ್ದು ಕೇಳಿದ ದಿನೇಶ್ ಗೆ ಅದು ಕಾಡು ಹಂದಿಯ ಹೆಜ್ಜೆ ಸಪ್ಪಳದಂತೆ ಕೇಳಿದೆ. ದಿನೇಶ್ ತಾವು ಕಾಡು ಹಂದಿಯನ್ನೇ ಹೊಡೆಯುತ್ತಿದ್ದೇನೆಂಡು ಭಾವಿಸಿ ರಂಜಿತ್ ಇದ್ದೆಡೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಸಿಕ್ಕ ರಂಜಿತ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮೀಣ ಪೋಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.
Comments are closed.