ಕರ್ನಾಟಕ

ಮದುವೆಯಾಗಿ ಒಂದು ವರ್ಷದವರೆಗೂ ಫಸ್ಟ್​ ನೈಟ್ ನಡೆಯಲಿಲ್ಲ: ನಂತರ ತಿಳಿದು ಬಂತು ಗಂಡನ ಬಣ್ಣ!

Pinterest LinkedIn Tumblr


ಬೆಂಗಳೂರು: ಮದುವೆಯಾಗಿ ವರ್ಷಗಳೇ ಕಳೆದರೂ ಮೊದಲ ರಾತ್ರಿ ನಡೆಯದಿದ್ದಾಗ ತನ್ನ ಗಂಡನ ಮೇಲೆ ಅನುಮಾನಗೊಂಡ ಪತ್ನಿಗೆ ತನ್ನ ಪತಿ ಸಲಿಂಗಕಾಮಿ ಎಂಬ ಹೃದಯಾಘಾತವಾಗುವಂತಹ ಸ್ಫೋಟಕ ಸತ್ಯ ತಿಳಿದ ಪ್ರಕರಣ ಬೆಳಕಿಗೆ ಬಂದಿದೆ.

ಬಾಣಸವಾಡಿ ಮೂಲದ ಯುವತಿಯೊಬ್ಬಳು ಕಳೆದೊಂದು ವರ್ಷದ ಹಿಂದೆ ಅಶ್ವಿನ್ ಎಂಬಾತನನ್ನು ವರಿಸಿದ್ದಳು. ಬಳಿಕ ದಂಪತಿ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನಲೆಸಿದ್ದರು. ಈ ಮಧ್ಯೆ ಅಶ್ವಿನ್​ ದಿನ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಅಲ್ಲದೆ, ಆತ ಲೇಟ್ ನೈಟ್ ಪಾರ್ಟಿಯಲ್ಲೇ ಹೆಚ್ಚು ತೊಡಗುತ್ತಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ದೈಹಿಕವಾಗಿ ಹಲ್ಲೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಈ ಎಲ್ಲ ಘಟನೆಯಿಂದ ನೊಂದ ಯುವತಿ ಪತಿಯ ಕಣ್ಣು ತಪ್ಪಿಸಿ ಅಮೆರಿಕದಿಂದ ತನ್ನ ತವರಿಗೆ ವಾಪಸ್ಸಾಗಿ, ಪಾಲಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಸಂಬಂಧ ಬಾಣಸವಾಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

Comments are closed.