ಬೆಂಗಳೂರು: ರಾಜ್ಯದಲ್ಲಿ ನ. 3ರಂದು ಉಪಚುನಾವಣೆ ನಡೆಯಲಿದ್ದು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಚುನಾವಣೆಯಲ್ಲಿ ಎಲ್ಲ ಕ್ಷೇತ್ರ ಗೆಲ್ಲಲು ಶ್ರಮಿಸುತ್ತಿವೆ. ಸರಕಾರದ ಮೈತ್ರಿ, ಚುನಾವಣೆಯಲ್ಲೂ ಮುಂದುವರಿದಿದೆ.
ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ಚುನಾವಣೆ ಗೆಲ್ಲಲು ಸರಕಾರ ಮತ್ತು ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಚುನಾವಣಾ ಆಯೋಗ ಸಿಎಂ ಕುಮಾರಸ್ವಾಮಿಗೆ ಸೂಚನೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಿಎಂ ಎಚ್ಡಿಕೆ ಯಾವುದೇ ರೀತಿಯ ಹೊಸ ಭರವಸೆ ನೀಡಬಾರದು, ಹೊಸ ಯೋಜನೆ ಪ್ರಕಟಿಸಬಾರದು ಎಂದು ಬಿಜೆಪಿ ರಾಜ್ಯ ಮುಕ್ತ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರಿಗೆ ದೂರು ನೀಡಿದೆ.
ಬಿಜೆಪಿ ಜಂಟಿ ವಕ್ತಾರ ಎಚ್ ಆನಂದ್ ಹೇಳಿಕೆ ನೀಡಿ, ಮಂಡ್ಯದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಸಿಎಂ ಎಚ್ಡಿಕೆ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ರೈತರಿಗೆ ಸಾಲಮುಕ್ತರಾಗಿರುವ ಪತ್ರವನ್ನು ರಾಜಕೀಯ ಸಮಾವೇಶದಲ್ಲಿ ವಿತರಿಸುತ್ತಿದ್ದಾರೆ.
ಸಾಲಮನ್ನಾ ಆಗಿಲ್ಲವಾದರೂ ರೈತರಿಗೆ ಆಮಿಷ ಒಡ್ಡುತ್ತಿದ್ದಾರೆ, ನೀತಿ ಸಂಹಿತೆ ಪಾಲಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
Comments are closed.