ಬಳ್ಳಾರಿ: ನೀನಂತೂ ಬಳ್ಳಾರಿ, ಬೆಂಗಳೂರಿಗೆ ಬರುವ ಆಗಿಲ್ಲ. ಅದೆಲ್ಲಿ ಕರಿತಿಯೋ ಕರಿ ಅಲ್ಲಿಯೇ ಬಂದು ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಸವಾಲನ್ನು ಸಿದ್ದರಾಮಯ್ಯ ಸ್ವೀಕರಿಸಿದ್ದಾರೆ.
ನಾನು ಅಕ್ರಮ ಗಣಿಗಾರಿಕೆ ಮಾಡಿಲ್ಲ. ನನ್ನ ಅಧಿಕಾರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದೆ. ಈ ಕುರಿತು ಅಂಕಿ ಅಂಶ ಸಹಿತ ಚರ್ಚೆಗೆ ನಾನು ಸಿದ್ದ. ನೀವು ಬನ್ನಿ ಎಂದು ಮಾಜಿ ಸಚಿವರು ಇಂದು ಮೊಳಕಾಲ್ಮೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯಗೆ ಪಂಥಾಹ್ವಾನ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಅಕ್ರಮ ಗಣಿಗಾರಿಕೆ ಮಾಡಿಲ್ಲ ಎಂದರೆ ಕೋಟಿ, ಕೋಟಿ ಹಣ ಎಲ್ಲಿಂದ ಬಂತು. ಮನೆಯಲ್ಲಿ ಚಿನ್ನದ ಚೇರು, ಚಿನ್ನದ ಕಮೋಡು ಹೇಗೆ ಬಂತು. ಇವು ನಿಮ್ಮ ಪೂರ್ವರ್ಜಿತ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.
ಗಣಿಗಾರಿಕೆಯಲ್ಲಿ ಕೋಟ್ಯಾಂತರ ಹಣ ಲೂಟಿ ಮಾಡಿದ್ದೀರಾ ಎಂದು ರಾಜ್ಯದ ಜನರೇ ಹೇಳುತ್ತಾರೆ. ನಾಲ್ಕು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದೀರಾ ನಿಮಗೆ ನಾಚಿಕೆ ಆಗಲ್ವಾ ಸವಾಲ್ ಹಾಕಲು ಎಂದು ತೀಕ್ಷ್ಣ ವಾಗ್ದಾಳಿ ನಡೆಸಿದರು.
ರಾಜ್ಯದ ಎಲ್ಲಾ ಕಡೆ ಬಿಜೆಪಿ ವಿರುದ್ಧದ ಗಾಳಿ ಬೀಸುತ್ತಿದೆ. ಐದು ಉಪಚುನಾವಣೆಯಲ್ಲಿ ನಾವು ಗೆಲ್ಲಲ್ಲಿದ್ದೇವೆ. ಎರಡು ಪಕ್ಷದ ನಾಯಕರು ಒಮ್ಮತದಿಂದ ಉಗ್ರಪ್ಪ ಅವರನ್ನು ಕಣಕ್ಕೆ ಇಳಿಸಿದ್ದು, ಅವರು ಗೆಲ್ಲಲಿದ್ದಾರೆ. ಲೋಕಸಭೆಯಲ್ಲಿ ಸಮರ್ಥವಾಗಿ ಮಾತನಾಡುವ ವ್ಯಕ್ತಿಯನ್ನು ಜನರು ಆರಿಸಬೇಕು ಎಂದರು.
Comments are closed.