ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗಿನಿಂದ ಕಾರ್ಯಕ್ರಮದ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅವರನ್ನು ಬೆಂಗಳೂರಿಗೆ ಬರಲು ಬಿಡುವುದಿಲ್ಲ ಎಂದು ಒಂದೆರಡು ಸಂಘಟನೆಯವರು ಎಚ್ಚರಿಕೆಯನ್ನೂ ಕೊಟ್ಟಿದ್ದರು.
ಇಂದು ಸಂಜೆ ನಾಗವಾರದಲ್ಲಿರುವ ಮಾನ್ಯತಾ ಪಾರ್ಕ್ನಲ್ಲಿ ನಡೆದ ‘ಫ್ಯೂಷನ್ ನೈಟ್’ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ಕನ್ನಡದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಹಾಡುಗಳಿಗೆ ಹೆಜ್ಜೆ ಹಾಕಿದರು. ಕನ್ನಡ ಹಾಡುಗಳಿಗೆ ಸೊಂಟ ಬಳುಕಿಸಿದ ಸನ್ನಿಯನ್ನು ನೋಡಲು ಸಾವಿರಾರು ಜನ ಜಮಾಯಿಸಿದ್ದರು. ‘ಶೇಷಮ್ಮ ಶೇಷಮ್ಮ’ ಹಾಡಿಗೆ ಡ್ಯಾನ್ಸ್ ಮಾಡಿದ ಸನ್ನಿ ಲಿಯೋನ್ ಜೊತೆಗೆ ಅಲ್ಲಿ ಜಮಾಯಿಸಿದ್ದ ಜನರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಎಲ್ಲರಿಗೂ ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭಾಶಯ ಕೋರಿದ ಸನ್ನಿ ಲಿಯೋನ್, ನಾನು ನಿಮ್ಮನ್ನು ತುಂಬ ಪ್ರೀತಿಸುತ್ತೇನೆ ಎಂದು ಕನ್ನಡದಲ್ಲಿಯೇ ಹೇಳಿದರು. ಸನ್ನಿ ಲಿಯೋನ್ ಡ್ಯಾನ್ಸ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬ ಬಾಟಲಿ ಎಸೆದ ಘಟನೆಯೂ ನಡೆಯಿತು. ಆತನನ್ನು ತಡೆದ ಸಿಬ್ಬಂದಿ ಹಾಗೆ ಮಾಡದಂತೆ ಎಚ್ಚರಿಕೆ ನೀಡಿದರು.
Comments are closed.