ಚಿತ್ರದುರ್ಗ: ಒಬ್ಬರು ಸತ್ತರೆ ಏನೂ ಆಗಲ್ಲ, ಇಷ್ಟೂ ಜನರು ಸತ್ತರೆ ಗತಿಯೇನು? ಎಂದು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಡಿಸಿಎಂ ಪರಮೇಶ್ವರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಭಾಗಿಯಾದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆ ಪರೀಕ್ಷಿಸಲು ಮಠದಲ್ಲಿ ತಯಾರಾದ ಆಹಾರ ಪರೀಕ್ಷೆ ಮಾಡಿದ್ದರ ಕುರಿತು ಗರಂ ಆದ ಶ್ರೀಗಳು, ವೇದಿಕೆಯಲ್ಲಿ ಪರಂ ಪಕ್ಕ ಕುಳಿತುಕೊಂಡೇ ವಿವಿಐಪಿ ಸಂಸ್ಕೃತಿಗೆ ಚಾಟಿ ಬೀಸಿದ್ದಾರೆ.
ವೇದಿಕೆ ಬಳಿ ಪೋಡಿಯಂ ಹಾಕಲು ಮುಂದಾದ ಪೋಲೀಸರ ನಡೆ ಬಗ್ಗೆ ಮಾತನಾಡಿ, ಅನೇಕ ಬಾರಿ ಸಿಎಂ, ಡಿಸಿಎಂ ಇಲ್ಲಿ ಬಂದು ಹೋಗಿದ್ದಾರೆ.ಆಗ ಇಲ್ಲದ ಪೋಡಿಯಂ ವ್ಯವಸ್ಥೆ ಈಗ ಯಾಕೆ ಬೇಕು? ರಾಜಕಾರಣಿಗಳು ಜನರ ಮಧ್ಯೆ ಇರಬೇಕು, ದೂರವಲ್ಲ. ಪೋಡಿಯಂ ಹಾಕಿದ್ರೆ ಅವರೆ ಬೇರೆ ನಾವೇ ಬೇರೆ ಎಂದಾಗುತ್ತದೆ. ಕಾನೂನು ಯಾರಿಗೆ ರಕ್ಷಣೆ ಕೊಡಬೇಕೋ ಅವರಿಗೆ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೆ ಡಿಸಿಎಂ ಅವರು ಸೇವಿಸುವ ಆಹಾರವನ್ನು ಪರೀಕ್ಷಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದರು. ನಿತ್ಯ ಮಠದಲ್ಲಿ ಸಾವಿರಾರು ಜನರು ಊಟ ಮಾಡುತ್ತಾರೆ. ಅವರು ಸೇವಿಸುವ ಆಹಾರವನ್ನ ಯಾರು ಪರೀಕ್ಷೆ ಮಾಡುವುದಿಲ್ಲ. ಆದರೆ, ಒಬ್ಬರು ಸೇವಿಸುವ ಆಹಾರವನ್ನು ಮಾತ್ರ ಪರೀಕ್ಷೆ ಮಾಡುತ್ತಾರೆ ಎಂದರು.
Comments are closed.