ಕರ್ನಾಟಕ

ಪಾರ್ಕಿಂಗ್ ಶುಲ್ಕ ಕೊಡದಿದ್ದಕ್ಕೆ ಹಲ್ಲೆ!

Pinterest LinkedIn Tumblr


ಚಿಕ್ಕಬಳ್ಳಾಪುರ: ಪಾರ್ಕಿಂಗ್ ಶುಲ್ಕ ಕೊಡದಿದ್ದಕ್ಕೆ ಯುವಕನೊಬ್ಬ ವ್ಯಕ್ತಿಯೊರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದೆ.

ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡುವ ಯುವಕ ಅಫ್ಸರ್ ಗಂಗರೆಕಾಲುವೆ ಗ್ರಾಮದ ಶ್ರೀನಿವಾಸ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಪರಿಣಾಮ ಶ್ರೀನಿವಾಸ್ ಅವರ ಕಿವಿಯಲ್ಲಿ ರಕ್ತ ಸ್ರಾವವಾಗಿದೆ.

ಶ್ರೀನಿವಾಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗಳನ್ನ ನೋಡಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡುವ ಅಫ್ಸರ್ ಬೈಕ್ ಗೆ ಹತ್ತು ರೂಪಾಯಿ ಪಾರ್ಕಿಂಗ್ ಶುಲ್ಕ ನೀಡುವಂತೆ ಆಗ್ರಹಿಸಿದ್ದಾನೆ. ಈ ವೇಳೆ ಪಾರ್ಕಿಂಗ್ ಶುಲ್ಕ ಕೊಡುವುದಿಲ್ಲ ಅಂತ ಪರಸ್ಪರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದ ಅತೀರೇಕಕ್ಕೆ ಹೋಗಿ ಅಫ್ಸರ್ ಶ್ರೀನಿವಾಸ್ ಅವರ ಮೇಲೆ ಹಲ್ಲೆ ಮಾಡಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಗಾಯಾಳು ಶ್ರೀನಿವಾಸ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಅಫ್ಸರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments are closed.