ವಿಜಯಪುರ: ಅಂತರ್ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮಗಳನ್ನು ಹೆತ್ತ ತಾಯಿಯೇ ಕೊಂದ ದುರಂತ ಘಟನೆ ವಿಜಯಪುರದಲ್ಲಿ ನಡೆದಿದೆ.
ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ರೇಣುಕಾಹತ್ಯೆಗೀಡದ ದುರ್ದೈವಿ. ಈಕೆ ಸಿರವಾರ ಗ್ರಾಮದ ಶಂಕರ ಎನ್ನುವವನನ್ನು ಪ್ರೀತಿಸಿ ವಿವಾಹವಾಗಿದ್ದಳು. ಎರಡು ವರ್ಷ ಸಂಸಾರವನ್ನು ನಡೆಸಿದ್ದ ರೇಣುಕಾ ಯಲಗೂರಿನಲ್ಲಿ ವಾಸವಿದ್ದಳು ಈಕೆ ನವೆಂಬರ್ .6ರಂದು ತನ್ನ ನಿವಾಸದಲ್ಲೇ ಹತ್ಯೆಗೀಡಾಗಿದ್ದಳು.
ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ಇದಕ್ಕೆ ಸಂಬಂಧಿಸಿ ಆಕೆಯ ತಾಯಿ ಶಿವಲಿಂಗಮ್ಮ ಸೇರಿ ಮೂವರನ್ನು ಬಂಧಿಸಿದ್ದಾರೆ.
ಅಂತರ್ಜಾತಿಯ ಯುವಕನನ್ನು ಪ್ರೇಮಿಸಿ ವಿವಾಹವಾಗಿದ್ದ ರೇಣುಕಾ ಮೇಲೆ ಆಕೆಯ ಕುಟುಂಬ ದ್ವೇಷ ಸಾಧಿಸುತ್ತಿತ್ತು. ರೇಣುಕಾ ತನ್ನ ಕುಟುಂಬದ ಮಾನ ಹರಾಜು ಹಾಕಿದ್ದಾಳೆಂದು ಆಕೆಯ ತಾಯಿ ಸೇರಿ ಎಲ್ಲರಿಗೂ ಅವಳ ಬಗ್ಗೆ ಸಿಟ್ಟಿತ್ತು.
ನವೆಂಬರ್ .6ರಂದು ಆರೋಪಿ ಶಿವಲಿಂಗಮ್ಮ ಕ್ಯಾದಿಗೇರಾ ದಿಂದ ಯಗಲೂರು ಗ್ರಾಮಕ್ಕೆ ಬಂದಿದ್ದಾಳೆ .ಹಾಗೆ ಬಂದವರು ರೇಣುಕಾ ಪತಿ ಮನೆಯಿಂಡ ಹೊರ ಹೋಗಿದ್ದ ವೇಳೆ ಚಾಕುವಿನಿಂದ ಮಗಳ ಕತ್ತು ಸೀಳಿ ಹತ್ಯೆ ಮಾಡಿದ್ದಾಳೆ. ಈ ಕೃತ್ಯಕ್ಕಾಗಿ ಆಕೆ ತನ್ನ ಇನ್ನೊಬ್ಬ ಅಳಿಯ ಹಾಗೂ ಮಗನ ಸಹಾಯವನ್ನೂ ಪಡೆದಿದ್ದಾಳೆ.
ಸಧ್ಯ ಶಿವಲಿಂಗಮ್ಮ, ಆಕೆಯ ಅಳಿಯ ರಮೇಶ್ ಹಾಗೂ ಪುತ್ರ ಮಲ್ಲಿಕಾರ್ಜುನ ಪೋಲೀಸರ ಅತಿಥಿಯಾಗಿದ್ದು ನಿಡಗುಂದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Comments are closed.