ಗದಗ: ಸಿದ್ದರಾಮಯ್ಯ ಸ್ವಯಂಘೋಷಿತ ಭಂಡ ಅಹಿಂದ ನಾಯಕ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪನವರಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ಈಶ್ವರಪ್ಪ ಮೆದುಳು ಇಲ್ಲದ ಪೆದ್ದ’ ಎಂದು ವ್ಯಂಗ್ಯವಾಡಿದ್ದಾರೆ.
ಗದಗ ಜಿಲ್ಲೆಯ ಹೆಲಿಪ್ಯಾಡ್ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಈಶ್ವರಪ್ಪನವರ ವಿರುದ್ಧ ಕಿಡಿಕಾರಿದರು.
ನಿನ್ನೆ ಗದಗದಲ್ಲಿ ಮಾತನಾಡುವಾಗ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದ ಈಶ್ವರಪ್ಪ, ಅವರೊಬ್ಬ ಸ್ವಯಂಘೋಷಿತ ಭಂಡ ನಾಯಕ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ, ನನಗೆ ಆ ರೀತಿ ವಿಶ್ವವಿದ್ಯಾಲಯದವರೇನಾದರೂ ಸರ್ಟಿಫಿಕೇಟ್ ಕೊಟ್ಟಿದ್ದಾರಾ? ಹಾಗೆ ಹೇಳಿರುವುದು ಈಶ್ವರಪ್ಪ ತಾನೇ.. ಆತನೊಬ್ಬ ಮಹಾನ್ ಪೆದ್ದ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿಯ ವರ್ಚಸ್ಸನ್ನು ಹಾಳು ಮಾಡಲು ಸಿದ್ದರಾಮಯ್ಯ ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ದ ಜನಾರ್ದನ ರೆಡ್ಡಿಯ ಹೇಳಿಕೆಯ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂದು ನೋಡಿದ್ದೀರಾ? ಯಡಿಯೂರಪ್ಪನವರೇ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಅಂದಮೇಲೆ ರೆಡ್ಡಿಯ ಪ್ರಶ್ನೆಗೆ ನಾನೇಕೆ ಉತ್ತರ ನೀಡಬೇಕು? ಅವರೇ ಬಿಜೆಪಿಯಲ್ಲಿ ಇಲ್ಲ ಎಂದಮೇಲೆ ಇಂತಹ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದಿದ್ದಾರೆ
Comments are closed.