ಕರ್ನಾಟಕ

ಬಾಗಲಕೋಟೆ ಸಿಇಒ ಸರ್ಜಿಕಲ್ ಸ್ಟ್ರೈಕ್ ಗೆ ಮೂರೇ ದಿನದಲ್ಲಿ 14 ಶಿಕ್ಷಕರ ಸಸ್ಪೆಂಡ್

Pinterest LinkedIn Tumblr


ಬಾಗಲಕೋಟೆ: ಕೆಲಸಕ್ಕೆ ಕರೀಬೇಡಿ ಊಟಕ್ಕೆ ಮರೀಬೇಡಿ ಎನ್ನುವಾಗೆ ಕೆಲಸ ಕೇಳಬೇಡಿ ಸಂಬಳ ಮಾತ್ರ ಬರಲಿ ಅಂತ ಇದ್ದ ಶಿಕ್ಷಕರಿಗೆ ಬಾಗಲಕೋಟೆ ಖಡಕ್ ಲೇಡಿ ಸಿಇಒ ಬಿಸಿ ಮುಟ್ಟಿಸಿದ್ದಾರೆ.

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ್ ಅವರು ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ ಮೂರೇ ಮೂರು ದಿನದಲ್ಲಿ ಬರೋಬ್ಬರಿ 14 ಜನ ಶಿಕ್ಷಕರನ್ನು ಸಸ್ಪೆಂಡ್ ಮಾಡಿದ್ದಾರೆ.

ಕಲಿಕೆಯಲ್ಲಿ ಮಕ್ಕಳು ಹಿಂದುಳುವಿಕೆ ಮತ್ತು ಶಾಲೆಗೆ ಗೈರು ಹಿನ್ನೆಲೆಯಲ್ಲಿ ಒಂದೇ ಶಾಲೆಯಲ್ಲಿನ 12 ಜನ ಸೇರಿದಂತೆ ಒಟ್ಟು 14 ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಿಡಿಸಿದ್ದಾರೆ.

ನವನಗರದ ಸರ್ಕಾರಿ ಬಾಲಕರ ಮಾದರಿ ಪ್ರಾಥಮಿಕ ಶಾಲೆಗೆ ಖುದ್ದು ಗಂಗೂಬಾಯಿ ಮಾನಕರ್ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಬರೋಬ್ಬರಿ 12 ಶಿಕ್ಷಕರನ್ನು ಅಮಾನತು ಮಾಡಿದ್ದಾರೆ.

ಹೀಗೆ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಬಾಗಲಕೋಟೆ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಬಿ. ಕಲ್ಲೋಳ ಸೇರಿ 14 ಜನ ಶಿಕ್ಷಕರನ್ನು ಅಮಾನತು ಮಾಡಿದ್ದು, ಈ ಮೂಲಕ ಕಾಲಾಹರಣ ಮಾಡುವ ಇತರೆ ಶಿಕ್ಷಕರಿಗೆ ವಾನಿಂಗ್ ಕೊಟ್ಟಿದ್ದಾರೆ.

ಶಿಕ್ಷಣ ಇಲಾಖೆ ವಿಚಾರಣೆ ಕಾಯ್ದಿರಿಸಿ ಸಸ್ಪೆಂಡ್ ಆದೇಶ ನೀಡಿದ್ದಾರೆ. ಇದು ಇತರರಿಗೆ ಎಚ್ಚರಿಕೆಯ ಗಂಟೆಯಾಗಿದೆ.

Comments are closed.