ಕರ್ನಾಟಕ

12 ವರ್ಷದ ನಂತರ ಮಗು: ವಿಷ ಪ್ರಸಾದಕ್ಕೆ ಪತಿಯ ಪ್ರಾಣ!: ಮಾರಮ್ಮನ ಎದುರು 2 ತಿಂಗಳ ಮಗುವಿನೊಂದಿಗೆ ಬಾಣಂತಿಯ ಆಕ್ರಂದನ

Pinterest LinkedIn Tumblr


ಹನೂರು: ಸುಳುವಾಡಿಯ ಕಿಚ್‌ಕುತ್‌ ಮಾರಮ್ಮನ ದೇವಾಲಯದಲ್ಲಿ ಶುಕ್ರವಾರ ಪ್ರಸಾದದಲ್ಲಿ ವಿಷಬೆರಕೆ ಮಾಡಿ 11 ಮಂದಿಯನ್ನು ಬಲಿತೆಗೆದುಕೊಂಡ ಅಮಾನವೀಯ ಘಟನೆಗೆ ಮನುಕುಲವೇ ಮರುಗುತ್ತಿದ್ದು, 2 ತಿಂಗಳ ಮಗುವನ್ನು ಹಿಡಿದು ರೋದಿಸುತ್ತಿರುವ ಬಾಣಂತಿಯೊಬ್ಬಳ ಗೋಳು ಎಂಥಹವರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.

ವಿವಾಹವಾದ 12 ವರ್ಷಗಳ ಬಳಿಕ ದೇವಿಯ ಅನುಗ್ರಹದಿಂದ ಮಗುವಾಗಿದೆ ಎಂದು ಶಾಂತರಾಜು ಅವರು ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದರು. ಆದರೆ ದುರಂತವೆಂದರೆ ಅವರು ಬದುಕುಳಿಯಲಿಲ್ಲ. ಬಾಣಂತಿ ಶಿವಗಾಮಿ ಪತಿಯ ಸಾವಿನಿಂದ ಕಂಗೆಟ್ಟಿದ್ದು 2 ತಿಂಗಳ ಮಗುವನ್ನು ಹಿಡಿದಕೊಂಡು ಕಣ್ಣೀರಿಡುತ್ತಿದ್ದಾರೆ.

ಈಗಾಗಲೇ 11 ಮಂದಿ ಪ್ರಾಣ ಕಳೆದುಕೊಂಡಿದ್ದು, ಆಹಾರ ಸೇವನೆ ಮಾಡಿರುವ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಗುಂಪುಗಳ ನಡುವಿನ ವೈಮನಸ್ಸಿನಿಂದಾಗಿ ಒಂದು ಗುಂಪು ಆಹಾರದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ.

Comments are closed.