ಕರ್ನಾಟಕ

ಟೆಕ್ಕಿಯಿಂದ ಯುವತಿಗೆ ಊಟಕ್ಕೆ ಆಹ್ವಾನ: ಅತ್ಯಾಚಾರ

Pinterest LinkedIn Tumblr


ಬೆಂಗಳೂರು: ನಿದ್ರೆ ಮಾತ್ರೆ ಬೆರೆಸಿದ ಜ್ಯೂಸ್​​ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಟೆಕ್ಕಿಯನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ದೆಹಲಿ ಮೂಲದ‌ ಮೈಕೆಲ್ ಸೊರೆಂಗ್(23) ಬಂಧಿತ ಆರೋಪಿ. ಈತ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಬೆಂಗಳೂರಿನಲ್ಲಿ ವಾಸವಾಗಿದ್ದ ಜಾರ್ಖಂಡ್​ನ ರಾಂಚಿ ಮೂಲದ ಯುವತಿಯನ್ನು ಕಳೆದ ಸೆಪ್ಟೆಂಬರ್​ 8 ರಂದು ಊಟಕ್ಕೆಂದು ಮನೆಗೆ ಆಹ್ವಾನಿಸಿ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

ಬಳಿಕ ಈ ಬಗ್ಗೆ ಸಂತ್ರಸ್ತೆ ಪ್ರಶ್ನಿಸಿದ್ದಕ್ಕೆ ಮದುವೆಯಾಗುತ್ತೇನೆಂದು ನಂಬಿಸಿ, ಕೆಲ ದಿನಗಳ ಬಳಿಕ ಆಕೆಯಿಂದ ದೂರವಿದ್ದ. ಆನಂತರ ಸಂತ್ರಸ್ತೆ ಆರೋಪಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಆತ ಫ್ಲ್ಯಾಟ್​ ಖಾಲಿ ಮಾಡಿ ಬೇರೆಡೆಗೆ ಪರಾರಿಯಾಗಿದ್ದ.

ನೊಂದ ಯುವತಿ ಟೆಕ್ಕಿ ಅತ್ಯಾಚಾರ ಎಸಗಿ, ಮೋಸ ಮಾಡಿರುವುದಾಗಿ ಬೆಳ್ಳಂದೂರು ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಐಪಿಸಿ ಸೆಕ್ಷನ್ 376, 420 ಅಡಿ ಎಫ್ಐಆರ್ ದಾಖಲಿಸಿ ಆರೋಪಿಯ ಜಾಡು ಹಿಡಿದು ಹೊರಟ ಪೊಲೀಸರು ಟೆಕ್ಕಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

Comments are closed.