ಕರ್ನಾಟಕ

ಬಂಡೀಪುರದಲ್ಲಿ ಭಾರೀ ಕಾಡ್ಗಿಚ್ಚು: ಸಿಬ್ಬಂದಿಯಿಂದ ಅರಣ್ಯ ರಕ್ಷಣೆ!

Pinterest LinkedIn Tumblr


ಚಾಮರಾಜನಗರ: ಬಂಡೀಪುರದಲ್ಲಿ ಭಾರೀ ಕಾಡ್ಗಿಚ್ಚನ್ನು ಅರಣ್ಯ ಸಿಬಂದಿಗಳು ಹರಸಾಹಸಪಟ್ಟು ತಹಬಂದಿಗೆ ತಂದು ಅರಣ್ಯವನ್ನು ರಕ್ಷಿಸಿದ್ದಾರೆ.

ಹಿಮವದ್‌ ಗೋಪಾಲ ಸ್ವಾಮಿ ಬೆಟ್ಟದ ಬಳಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ 20 ಎಕರೆಯಷ್ಟು ವ್ಯಾಪಿಸಿದೆ.

ಅಗ್ನಿ ಶಾಮಕ ದಳದ ಸಿಬಂದಿಗಳೂ ಸ್ಥಳಕ್ಕೆ ಆಗಮಸಿದ್ದು, ಅದಕ್ಕೂ ಮುನ್ನ ಅರಣ್ಯ ಸಿಬಂದಿಗಳು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ವ್ಯಾಪಿಸಿದ್ದೆ ಆದಲ್ಲಿ ನೂರಾರು ಪ್ರಾಣಿಗಳು, ಪಕ್ಷಿ ಸಂಕುಲ ಮತ್ತು ಮರ ಗಿಡಗಳು ನಾಶವಾಗುತ್ತಿದ್ದವು.

Comments are closed.