ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಖಂಡಿಸಿದ್ದಾರೆ. ಇದೊಂದು ಹೇಯ ಕೃತ್ಯ. ಗುಪ್ತಚರ ವೈಫಲ್ಯ ಇದೆ ಎಂದು ಹೇಳಲು ಸಾಧ್ಯವಿಲ್ಲ. ಪಕ್ಷಾತೀತವಾಗಿ ನಾವೆಲ್ಲಾ ಇದನ್ನು ಎದುರಿಸಬೇಕು. ಕೇಂದ್ರ ಸರ್ಕಾರ ಈಗ ಗಂಭೀರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ನಾಳೆ ಕೇರಳದಲ್ಲಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಸರ್ವಪಕ್ಷ ಸಭೆಯ ನಿರ್ಧಾರಕ್ಕೆ ನಾವು ಬದ್ಧ. ದೇಶದ ವಿಚಾರದಲ್ಲಿ ರಾಜಕೀಯ ಬೇಡ. ಯಾಕೆ ದಾಳಿ ಆಯ್ತು ಎಂದು ಯೋಚಿಸುತ್ತಾ ಸಮಯ ವ್ಯರ್ಥ ಮಾಡುವುದಲ್ಲ. ಮುಂದೆ ಏನು ಮಾಡಬೇಕು ಎಂದು ಯೋಚಿಸಬೇಕು ಎಂದರು.
ಇಂತಹ ಭಯೋತ್ಪಾದಕರನ್ನು ಸಂಪೂರ್ಣ ನಾಶ ಮಾಡಬೇಕು. ಕಳೆದ ಬಾರಿ ಹೀಗಾದಾಗ ಸರ್ಜಿಕಲ್ ಆಪರೇಷನ್ ಎಂಬ ಸ್ಟೆಪ್ ತೆಗೆದುಕೊಂಡಿತ್ತು. ಆಗ ಎಲ್ಲರೂ ಕೇಂದ್ರದ ಜೊತೆ ಬೆಂಬಲಕ್ಕೆ ನಿಂತಿದ್ದರು. ಈ ಬಾರಿ ಕೂಡ ಭಯೋತ್ಪದನೆಯನ್ನು ಮಟ್ಟ ಹಾಕಲು ಕೇಂದ್ರದ ಜೊತೆ ನಾವೆಲ್ಲ ಇದ್ದೇವೆ ಎಂದು ಭರವಸೆ ನೀಡಿದರು.
ಮಂಡ್ಯದ ಹುತಾತ್ಮ ವೀರಯೋಧನ ಸಾವಿಗೆ ಸಂತಾಪ ಸೂಚಿಸಿದರು. ಹುತಾತ್ಮ ಯೋಧನ ಮನೆಗೆ ಕುಮಾರಸ್ವಾಮಿ ಹೋಗುತ್ತಾರೆ. ಅಂತ್ಯಸಂಸ್ಕಾರದಲ್ಲಿಯೂ ಪಾಲ್ಗೊಳ್ಳುತ್ತಾರೆ. ಪಾರ್ಥಿವ ಶರೀರ ಏರ್ಪೋರ್ಟ್ಗೆ ಬಂದಾಗ ಅಂತಿಮ ದರ್ಶನ ಪಡೆಯಲು ನಾನು ಹೋಗುತ್ತೇನೆ ಎಂದು ಹೇಳಿದರು.
Comments are closed.