ಕರ್ನಾಟಕ

ಮಸಾಜ್‍ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೈಸೂರಿನ ಎರಡು ಸ್ಪಾ ಮೇಲೆ ದಾಳಿ: ಐವರ ಬಂಧನ; 6 ಮಹಿಳೆಯರ ರಕ್ಷಣೆ

Pinterest LinkedIn Tumblr

ಮೈಸೂರು: ನಗರದ ಎರಡು ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು, ಮಸಾಜ್‍ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದು, ಆರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಬಂಧಿತರನ್ನು ಮೈಸೂರಿನ ಹರೀಶ್ (38), ನಾರಾಯಣ್ (57), ಕೋಳಿಕೋಡ್ ನ ಧೀರಜ್ (27), ಅಶ್ವಥ್ (29) ಹಾಗೂ ಆಶಿಲ್ (29) ಎಂದು ಗುರುತಿಸಲಾಗಿದೆ.

ಸಿಸಿಬಿಯ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, 6 ಸಾವಿರ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಮುಂಬೈನ ಓರ್ವ ಮಹಿಳೆ ಸೇರಿ ಆರು ಮಹಿಳೆಯರನ್ನು ರಕ್ಷಿಸಲಾಗಿದ್ದು, ನಜರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.