ಬೆಂಗಳೂರು: ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಬ್ಬರು ಸ್ಟಾಪ್ ನರ್ಸ್ ಗಳು ಯಶವಂತಪುರ- ಬೀದರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ವೈದ್ಯಕೀಯ ಪರಿಕರಗಳ ಸಹಾಯ ಇಲ್ಲದೆ ಗರ್ಭೀಣಿಯೊಬ್ಬರಿಗೆ ಹೆರಿಗೆ ಮಾಡಿಸುವ ಮೂಲಕ ತಾಯಿ ಹಾಗೂ ಹೆಣ್ಣು ಮಗುವಿನ ಜೀವ ಕಾಪಾಡಿದ್ದಾರೆ.
ನರ್ಸಿಂಗ್ ನಲ್ಲಿ ಬಿಎಸ್ ಸಿ ಪೂರೈಸಿರುವ ಶಶಿಕಲಾ ಹಾಗೂ ವೀಣಾ ಗುರುವಾರ ರಾತ್ರಿ ರೈಲಿನಲ್ಲಿ ಬೀದರ್ ಗೆ ತೆರಳುತ್ತಿದ್ದಾಗ ಜನರಲ್ ಬೋಗಿಯಲ್ಲಿದ್ದ ಮಾನಮ್ಮ ಎಂಬ ಗರ್ಭೀಣಿ ಹೆರಿಗೆ ನೋವಿನಿಂದ ಕಷ್ಟಪಡುತ್ತಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿಗೆ ಧಾವಿಸಿ ಪರೀಕ್ಷೆ ನಡೆಸಿದಾಗ ಮಗು ಹೊರಗೆ ಬರುತ್ತಿರುವ ಸೂಚನೆ ಸಿಕ್ಕಿದೆ.
ನಂತರ ರೈಲಿನ ಬಾಗಿಲು ಮತ್ತು ಶೌಚಾಲಯದ ನಡುವಿನ ಪ್ರದೇಶವನ್ನು ಆಪರೇಷನ್ ಥಿಯೇಟರ್ ಆಗಿ ಪರಿವರ್ತಿಸಿಕೊಂಡು ಪ್ರಯಾಣಿಕರ ಬೇಡ್ ಶೀಟ್ ನಿಂದ ಆ ಪ್ರದೇಶವನ್ನು ಮುಚ್ಚಿ, ಬೇರೆ ಪ್ರಯಾಣಿಕರಿಂದ ಅಗತ್ಯವಿದ್ದ ಚಾಕು ಮತ್ತಿತರ ವಸ್ತುಗಳನ್ನು ಪಡೆದು ಹೆರಿಗೆ ಮಾಡಿಸಲಾಯಿತು, 20ರಿಂದ 15 ನಿಮಿಷದಲ್ಲಿಯೇ ಹೆರಿಗೆ ಮುಗಿಯಿತು. ಹೆಣ್ಣುಮಗುವೊಂದು ಜನನವಾಯಿತು ಎಂದು ನರ್ಸ್ ಶಶಿಕಲಾ ಹೇಳಿದ್ದಾರೆ.
ಮಾನಾಮ್ಮರಿಗೆ ಇದು ಚೊಚ್ಚಲ ಹೆರಿಗೆ, ಆದರೂ, ಮುಂಜಾಗ್ರಾತೆ ವಹಿಸಿರಲ್ಲ, ನಮ್ಮಗೂ ಕೀಡಾ ಸ್ವಲ್ಪ ಭಯ ಇತ್ತು. ಆದರೆ, ನಮ್ಮಗೆ ಬೇರೆ ದಾರಿ ಇರಲಿಲ್ಲ. ವಿಳಂಬವಾಗಿದ್ದರೆ ತಾಯಿ ಹಾಗೂ ಮಗು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಇದಕ್ಕೂ ಮುನ್ನ ಹಲವಾರು ಹೆರಿಗೆಗಳನ್ನು ಮಾಡಿಸಿದ್ದೇವು. ಆದರೆ. ಈ ಬಾರಿ ಯಾವುದೇ ವೈದ್ಯಕೀಯ ಸಲಕರಣೆ ಇಲ್ಲದೆ ರೈಲಿನಲ್ಲಿಯೇ ಹೆರಿಗೆ ಮಾಡಿಸಿರುವುದಾಗಿ ವೀಣಾ ಹೇಳಿದರು.
ಈ ಇಬ್ಬರು ನರ್ಸ್ ಗಳ ಬಗ್ಗೆ ಹೆಮ್ಮೆ ಉಂಟಾಗಿದ್ದು, ಅವರನ್ನು ಸನ್ಮಾನಿಸಲಾಗುವುದು ಎಂದು ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಿಳಿಸಿದೆ.
Comments are closed.