ಕರ್ನಾಟಕ

ಇವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ?

Pinterest LinkedIn Tumblr


ಬೆಂಗಳೂರು : ಚಿತ್ರದುರ್ಗ ಭಾಗದ ಜನರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗಿ ಅಲ್ಲಿನ ಯುವ ನಾಯಕ, ಸಮಾಜ ಸೇವಕ ಎನಿಸಿಕೊಂಡಿರುವ ಸೋಮಶೇಖರ್‌ ಜಯರಾಜ್‌ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಸೋಮಶೇಖರ್‌ ಜಯರಾಜ್‌ ಅವರು ಕ್ಷೇತ್ರದಲ್ಲಿ ಈಗಾಗಲೇ ಮಾಡಿರುವ ಜನೋಪಕಾರಿ ಕಾರ್ಯಗಳು ಮತ್ತು ಜನರ ಕಷ್ಟಗಳಿಗೆ ಸ್ಪಂದಿಸಿರುವ ವಿಚಾರಗಳನ್ನು ಆಧರಿಸಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಹಿಂದಿನಿಂದಲೂ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೋಮಶೇಖರ್‌ ಜಯರಾಜ್‌, ರಾಜಕಾರಣವನ್ನೂ ಜತೆಗೇ ಮೈಗೂಡಿಸಿಕೊಂಡು ಬಂದರು. ಹಾಸನದ ಸಕಲೇಶಪುರ ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಪರಾಜಿತರಾದರು. ಆ ಮೂಲಕ ಆ ಭಾಗದಲ್ಲಿ ದುರ್ಬಲವಾಗಿದ್ದ ಬಿಜೆಪಿಯನ್ನು ಹಿಂದೆಂದಿಗಿಂತಲೂ ಪ್ರಬಲಗೊಳಿಸಿದರು. ಆನಂತರ ವಿರಮಿಸದೆ ಚಿತ್ರದುರ್ಗ ಕ್ಷೇತ್ರದ ಕಡೆ ತಮ್ಮ ಸೇವಾ ಕಾರ್ಯಗಳನ್ನು ವಿಸ್ತರಿಸಿದರು.

ಪರಿಸರವನ್ನು ಅತ್ಯಂತ ಹೆಚ್ಚಿನ ರೀತಿಯಲ್ಲಿ ಪ್ರೀತಿಸುವ ಇವರು ಹಾಸನ ಮತ್ತು ಇತ್ತೀಚಿಗೆ ಚಿತ್ರದುರ್ಗದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳಸುತ್ತಿದ್ದಾರೆ. ಹಾಸನದಲ್ಲಿ ಸುಮಾರು 200 ಬೋರ್‌ವೆಲ್‌ಗಳನ್ನು ತೆಗೆಸಿ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮಾಡಿದ್ದಾರೆ. 500ಕ್ಕೂ ಅಧಿಕ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಇನ್ನು ಸಾಮೂಹಿಕ ವಿವಾಹ ಮತ್ತು ವಿವಾಹ ಕಾರ್ಯಗಳಿಗೆ ಆರ್ಥಿಕ ನೆರವು ನೀಡುವುದರಲ್ಲಿ ಇವರು ಎಂದಿಗೂ ಹಿಂದೆ ಸರಿದಿಲ್ಲ.

ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಸುವುದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಪುಸ್ತಕ ಮತ್ತು ಪಠ್ಯ ಪರಿಕರಗಳ ನೆರವು ಒದಗಿಸುವುದು, ವಿದ್ಯಾಭ್ಯಾಸಕ್ಕೆ ಆರ್ಧಿಕ ನೆರವು ನೀಡುವುದು ಇವರಿಗೆ ಹಿಂದಿನಿಂದಲೂ ಬಂದಿರುವ ಅಭ್ಯಾಸ. ಪ್ರತಿಯೊಂದು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲು ನೆರವು ನೀಡುವುದು, ಅನೇಕ ಅನಾಥಾಶ್ರಮಗಳಿಗೆ ಮತ್ತು ವೃದ್ಧಾಶ್ರಮಗಳಿಗೆ ಬಟ್ಟೆ, ಊಟೋಚಾರಗಳಿಗೆ ನೆರವು ನೀಡುವುದು ಜತೆಗೆ ಶಾಲಾ ಮಕ್ಕಳ ಪ್ರಯಾಣಕ್ಕೆ ಬಸ್‌ಗಳನ್ನು ಒದಗಿಸುವುದಕ್ಕೆ ಇವರ ಕೈ ಸದಾ ಮುಂದಾಗಿತ್ತದೆ ಎನ್ನುತ್ತಾರೆ ಚಿತ್ರದುರ್ಗದ ಜನತೆ.

ಸೋಮಶೇಖರ್‌ ಜಯರಾಜ್‌ ಅವರು ಬೋವಿ ಸಮುದಾಯಕ್ಕೆ ಸೇರಿದ್ದು, ಈ ಭಾಗದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 2ಲಕ್ಷಕ್ಕೂ ಅಧಿಕ ಇರುವ ಬೋವಿ ಸಮಾಜದ ಬೆಂಬಲದ ಹಿನ್ನೆಲೆಯಲ್ಲಿ ಚುನಾವಣಾ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗದಲ್ಲಿ ಬೋವಿ ಸಮುದಾಯದವರೇ ನಿರ್ಣಾಯಕವಾಗಿದ್ದು, ಲೋಕಸಭಾ ವ್ಯಾಪ್ತಿಯಲ್ಲಿ ಆ ಸಮಾಜದವರೇ ಮೂರು ಶಾಸಕರಿದ್ದಾರೆ. ಇನ್ನು ಗಮನಿಸಿದರೆ, ಬೋವಿ ಸಮುದಾಯದವರು ಈ ಭಾಗದಲ್ಲಿ ಎಷ್ಟುನಿರ್ಣಾಯಕರು ಎನ್ನುವುದು ಸ್ಪಷ್ಟವಾಗಿದೆ. ಈ ಸಮಾಜದ ಜತೆ ಸೋಮಶೇಖರ್‌ ಜಯರಾಜ್‌ ಅವರು ನಿಕಟ ಸಂಪರ್ಕದಲ್ಲಿದ್ದು, ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಹಾಗೆಯೇ ಇತರ ಜನಾಂಗಗಳ ಜನತೆಗೂ ನಿರಂತರ ಒಡನಾಟ ಹೊಂದಿದ್ದಾರೆ. ಇಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಅವರು ಈಗ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.

ಈ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ ಪಡೆಯಲು ಈಗಾಗಲೇ ಅನೇಕರು ಪೈಪೋಟಿ ನಡೆಸುತ್ತಿದ್ದು, ಅವರೆಲ್ಲರ ಪೈಕಿ ಸೋಮಶೇಖರ್‌ ಜಯರಾಜ್‌ ಪ್ರಮುಖ ಸ್ಥಾನದಲ್ಲಿದ್ದಾರೆ. ಈಗಾಗಲೇ ಹಾಸನ ಜಿಲ್ಲೆಯಲ್ಲಿ ಸಾಕಷ್ಟುಬಿಜೆಪಿಯನ್ನು ಸಂಘಟನೆ ಮಾಡಿ ಹೆಚ್ಚು ಬಲ ತರುವಲ್ಲಿ ಸೋಮಶೇಖರ್‌ ಜಯರಾಜ್‌ ಹೆಚ್ಚು ಶ್ರಮಿಸಿದ್ದು, ಇದೇರೀತಿ ಚಿತ್ರದುರ್ಗದಲ್ಲೂ ಆಪಾರ ಕಾಣಿಕೆ ಸಲ್ಲಿಸುತ್ತಿದ್ದಾರೆ. ಇಂಥವರಿಗೆ ಬಿಜೆಪಿ ಇವರಿಗೆ ಟಿಕೆಟ್‌ ನೀಡಿದರೆ, ಚುನಾವಣೆಯಲ್ಲಿ ಗೆಲ್ಲುವ ಸಾಧ್ಯ ಎನ್ನುತ್ತದೆ ಅಭಿಮಾನಿ ಬಳಗ.

Comments are closed.