ಕರ್ನಾಟಕ

ಲೋಕಸಭಾ ಚುನಾವಣೆ: ರಾಜ್ಯ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

Pinterest LinkedIn Tumblr


ಬೆಂಗಳೂರು,: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಕಸರತ್ತು ಕೂಡ ಅಷ್ಟೇ ಜೋರಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಅಖಾಡಕ್ಕಿಳಿದರೆ, ಬಿಜೆಪಿ ಏಕಾಂಗಿ ಸ್ಪರ್ಧೆಯಾಗಿ ಧುಮುಕಲಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ನಡೆದಿದೆ.

ಇನ್ನು ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಫೈನಲ್ ಪಟ್ಟಿ ಹೈಕಮಾಂಡ್ ಅಂಗಳ ತಲುಪಿದೆ. ಹಾಲಿ ಸಂಸದರಿಗೆ ಟಿಕೇಟ್ ಬಹುತೇಕ ಪಕ್ಕಾ ಎಂದು ಬಿಎಸ್ ವೈ ಸುಳಿವು ನೀಡಿದ್ದು, ಇನ್ನುಳಿದ ಕ್ಷೇತ್ರಗಳ ಟಿಕೇಟ್ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.

ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ನೀಡಿ ಬಂದಿದ್ದು, ಈ ವಾರದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ಬಳಿಕ ಪಟ್ಟಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17ರಲ್ಲಿ ಗೆಲುವು ಸಾಧಿಸಿತ್ತು. ಆದ್ರೆ ಉಪಚುನಾವಣೆಯಲ್ಲಿ ಬಳ್ಳಾರಿಯನ್ನು ಕಳೆದುಕೊಂಡು 16 ಸ್ಥಾನಗಳಿಗೆ ಕುಸಿದಿದೆ.ಆದ್ರೆ, ಈ ಬಾರಿ 22 ಕ್ಷೇತ್ರಗಳನ್ನು ಗೆಲ್ಲಲು ಗುರಿಹೊಂದಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ.

1. ಬೆಳಗಾವಿ : ಸುರೇಶ್ ಅಂಗಡಿ [ಹಾಲಿ ಸಂಸದ].
2. ಚಿಕ್ಕೋಡಿ-ಸದಲಗಾ : ರಮೇಶ್ ಕತ್ತಿ/ಪ್ರಭಾಕರ್ ಕೋರೆ
3. ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್ [ಹಾಲಿ ಸಂಸದ].
4. ವಿಜಯಪುರ : ರಮೇಶ್ ಜಿಗಜಿಣಗಿ [ಹಾಲಿ ಸಂಸದ] .
5. ಬೀದರ್ : ಭಗವಂತ ಖೂಬಾ [ಹಾಲಿ ಸಂಸದ].
6. ರಾಯಚೂರು : ಸಣ್ಣ ಫಕೀರಪ್ಪ/ಶಿವನಗೌಡ ನಾಯಕ್.
7. ಕಲಬುರಗಿ : ಡಾ.ಉಮೇಶ್ ಜಾಧವ್.
8. ಕೊಪ್ಪಳ : ಕರಡಿ ಸಂಗಣ್ಣ [ಹಾಲಿ ಸಂಸದ].
9. ಬಳ್ಳಾರಿ : ವೆಂಕಟೇಶ್ ಪ್ರಸಾದ್/ ಜೆ.ಶಾಂತಾ [ಉಪಚುನಾವಣೆಯಲ್ಲಿ ಸೋಲು].
10. ಚಿತ್ರದುರ್ಗ : ಮಾದಾರ ಚೆನ್ನಯ್ಯ ಶ್ರೀ/ ಜೆ.ಜನಾರ್ದನ ಸ್ವಾಮಿ.
11. ಕೋಲಾರ : ಡಿ.ಎಸ್.ವೀರಯ್ಯ/ ನಾರಾಯಣಸ್ವಾಮಿ.
12. ತುಮಕೂರು : ಜೆ.ಹೆಚ್.ಬಸವರಾಜ್/ ಸುರೇಶ್ ಗೌಡ.
13. ಬೆಂಗಳೂರು ದಕ್ಷಿಣ : ಡಾ.ತೇಜಸ್ವಿನಿ ಅನಂತಕುಮಾರ್ [ಅನಂತ್ ಕುಮಾರ್ ಪತ್ನಿ].
14. ಬೆಂಗಳೂರು ಉತ್ತರ : ಡಿ.ವಿ.ಸದಾನಂದಗೌಡ [ಹಾಲಿ ಸಂಸದ].
15. ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್ [ಹಾಲಿ ಸಂಸದ].
16. ಬೆಂಗಳೂರು ಗ್ರಾಮಾಂತರ : ತೇಜಸ್ವಿನಿ ರಮೇಶ್/ ಸಿ.ಪಿ.ಯೋಗೇಶ್ವರ್.
17. ಮೈಸೂರು-ಕೊಡಗು : ಪ್ರತಾಪ್ ಸಿಂಹ [ಹಾಲಿ ಸಂಸದ].
18. ಮಂಡ್ಯ : ಡಾ.ಎಲ್. ಸಿದ್ಧರಾಮಯ್ಯ/ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಗೆ ಬೆಂಬಲ ಸಾಧ್ಯತೆ.
19. ಚಾಮರಾಜನಗರ : ಪ್ರೊ. ಕೃಷ್ಣಮೂರ್ತಿ/ಎಂ.ಶಿವಣ್ಣ, ವಿ.ಶ್ರೀನಿವಾಸ ಪ್ರಸಾದ್.
20. ದಾವಣಗೆರೆ : ಜಿ.ಎಂ.ಸಿದ್ದೇಶ್ವರ್ [ಹಾಲಿ ಸಂಸದ].
21. ಶಿವಮೊಗ್ಗ : ಬಿ.ವೈ. ರಾಘವೇಂದ್ರ [ಹಾಲಿ ಸಂಸದ].
22. ಹಾವೇರಿ-ಗದಗ : ಶಿವಕುಮಾರ್ ಉದಾಸಿ [ಹಾಲಿ ಸಂಸದ].
23. ಧಾರವಾಡ-ಹುಬ್ಬಳ್ಳಿ : ಪ್ರಹ್ಲಾದ್ ಜೋಷಿ [ಹಾಲಿ ಸಂಸದ].
24. ಉತ್ತರ ಕನ್ನಡ : ಅನಂತಕುಮಾರ್ ಹೆಗಡೆ [ಹಾಲಿ ಸಂಸದ].
25. ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ [ಹಾಲಿ ಸಂಸದ]
26. ದಕ್ಷಿಣ ಕನ್ನಡ‌ : ನಳಿನ್‌ಕುಮಾರ್ ಕಟೀಲು [ಹಾಲಿ ಸಂಸದ].
27. ಹಾಸನ :- ಪ್ರೀತಂಗೌಡ/ ಆಪರೇಷನ್ ಕಮಲದ ಮೂಲಕ ಹೊಸ ಮುಖ
28. ಚಿಕ್ಕಬಳ್ಳಾಪುರ : ಬಿ‌‌.ಎನ್. ಬಚ್ಚೇಗೌಡ/ ಶರತ್ ಬಚ್ಚೇಗೌಡ.

Comments are closed.