ನವದೆಹಲಿ: ಕನ್ನಡ ಬಹಳ ಸುಂದರವಾದ ಭಾಷೆ ಎಂದು ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ಹಾಡಿ ಹೊಗಳಿದ್ದಾರೆ.
ಇತ್ತೀಚೆಗೆ ಲೋಕಸಭಾ ಚುನಾವಣಾ ಪ್ರಚಾರದ ನಿಮಿತ್ತ ಕರ್ನಾಟಕದ ಕಲ್ಬುರ್ಗಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಕನ್ನಡದಲ್ಲೇ ಭಾಷಣ ಆರಂಭಿಸಿ ನೆರೆದಿದ್ದವರ ಮನ ಗೆದ್ದಿದ್ದರು. ‘ಕಲ್ಬುರ್ಗಿಯ ಎಲ್ಲ ಬಂಧು-ಭಗಿನಿಯರಿಗೆ ನಮಸ್ಕಾರ. ಕಲ್ಬುರ್ಗಿ ಜಿಲ್ಲೆ ತ್ಯಾಗ, ಸೇವಾಮನೋಭಾವಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬಂದು ಮಾತನಾಡುತ್ತಿರುವುದು ನನಗೆ ಅತ್ಯಂತ ಸಂತೋಷ ತಂದಿದೆ’ ಎಂದು ಕನ್ನಡದಲ್ಲೇ ಹೇಳಿದ್ದರು. ಆ ವಿಡಿಯೋ ಈಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನು ಕರ್ನಾಟಕದ ಸಹನಾ ಹೊಳಿಮಠ್ ಎಂಬುವವರು ಹೊಗಳಿ, ಪ್ರಧಾನಿ ಧ್ವನಿಯಲ್ಲಿ ಕನ್ನಡ ಕೇಳುವುದಕ್ಕೆ ಖುಷಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಿ ಟ್ವೀಟ್ ಮಾಡಿದ್ದಲ್ಲದೇ ಕನ್ನಡ ಬಹಳ ಸುಂದರವಾದ ಭಾಷೆ ಎಂದು ಟ್ವೀಟ್ ಮಾಡಿದ್ದಾರೆ.
That lovely moment when Modiji speaks in Kannada 😊ಎಷ್ಟು ಖುಷಿ ಆಗುತ್ತೆ ಅಲ್ವಾ ಮೋದಿಜೀ ಕನ್ನಡದಲ್ಲಿ ಮಾತನಾಡಿದಾಗ 😊 @girishalva https://t.co/iJfmxbiWtn
— Sahana(Renuka)Holimath🇮🇳 (@SHolimath) March 6, 2019
Kannada is a beautiful language. https://t.co/opw8Rz4znA
— Narendra Modi (@narendramodi) March 11, 2019
ಇನ್ನು ತಮ್ಮ ಟ್ವೀಟ್ ಗೆ ಸ್ವತಃ ಪ್ರಧಾನಿಗಳಿಂದಲೇ ಪ್ರತಿಕ್ರಿಯೆ ಬಂದಿರುವುದಕ್ಕೆ ಸಹನಾ ಹೊಳಿಮಠ್ ಅವರೂ ಕೂಡ ತುಂಬಾ ಖುಷಿ ಪಟ್ಟಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ಅಂತೆಯೇ ಪ್ರಧಾನಿ ಮೋದಿ ಅವರ ಕನ್ನಡ ಪ್ರೀತಿಗೆ ಹಲವು ಕನ್ನಡ ಟ್ವೀಟಿಗರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Comments are closed.