ಬೆಂಗಳೂರು: ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಟಿಕೆಟ್ ಹಂಚಿಕೆ ಅಂತಿಮಗೊಂಡಿದೆ. 8 ಕ್ಷೇತ್ರಗಳು ಜೆಡಿಎಸ್ಗೆ ಸಿಕ್ಕಿವೆ. ಇನ್ನುಳಿದ 20 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ದಾವಣಗೆರೆ, ಚಿಕ್ಕೋಡಿ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ದೊಡ್ಡಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟು ಉಳಿದ 11 ಕ್ಷೇತ್ರಗಳಲ್ಲಿ ಇಬ್ಬರಿಗಿಂತ ಹೆಚ್ಚು ಸಂಭಾವ್ಯ ಅಭ್ಯರ್ಥಿಗಳಿದ್ದಾರೆ. ತುಮಕೂರು ಹೊರತುಪಡಿಸಿ ಎಂಟು ಹಾಲಿ ಕಾಂಗ್ರೆಸ್ ಸಂಸದರಿಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಿತವಾಗಿದೆ.
ಬೆಂಗಳೂರು ಸೆಂಟ್ರಲ್, ಬೀದರ್, ಬಾಗಲಕೋಟೆ, ಕೊಪ್ಪಳ, ಧಾರವಾಡ, ಹಾವೇರಿ, ಮಂಗಳೂರು ಮೊದಲಾದ ಕ್ಷೇತ್ರಗಳಲ್ಲಿ ಕೈ ಟಿಕೆಟ್ಗೆ ತೀವ್ರ ಪೈಪೋಟಿ ನಡೆದಿದೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು:
1) ಬೀದರ್: ಈಶ್ವರ್ ಖಂಡ್ರೆ, ಸಿಎಂ ಇಬ್ರಾಹಿಂ, ವಿಜಯ್ ಸಿಂಗ್
2) ಬಾಗಲಕೋಟೆ: ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್, ಅಜಯ್ ಕುಮಾರ್ ಸರನಾಯಕ್
3) ಕೊಪ್ಪಳ: ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್, ಕೆ. ವಿರುಪಾಕ್ಷಪ್ಪ, ಬಸವರಾಜ್ ರಾಯರೆಡ್ಡಿ
4) ಬೆಳಗಾವಿ: ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್( ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ) ನಾಗರಾಜ್ ಯಾದವ್, ರಮೇಶ್ ಜಾರಕಿಹೊಳಿ, ವಿವೇಕ್ ರಾವ್ ಪಾಟೀಲ್
5) ಧಾರವಾಡ: ವಿನಯ್ ಕುಲಕರ್ಣಿ, ಶಾಖಿರ್ ಸನದಿ (ಐ.ಜಿ. ಸನದಿ ಪುತ್ರ)
6) ಹಾವೇರಿ: ಬಸವರಾಜ್ ಶಿವಣ್ಣವರ, ಸಲೀಂ ಅಹಮದ್, ಡಿ. ಆರ್. ಪಾಟೀಲ್, ಕೋಳಿವಾಡ
7) ದಾವಣಗೆರೆ: ಎಸ್.ಎಸ್. ಮಲ್ಲಿಕಾರ್ಜುನ,
8) ಮಂಗಳೂರು: ರಮಾನಾಥ ರೈ, ಐವಾನ್ ಡಿಸೋಜಾ, ಮೋಯುದ್ದೀನ್ ಬಾವಾ
9) ಬೆಂಗಳೂರು ಕೇಂದ್ರ: ರಿಜ್ವಾನ್ ಅರ್ಷದ್, ಬಿ.ಕೆ. ಹರಿಪ್ರಸಾದ್, ರೋಷನ್ ಬೇಗ್, ಎಚ್.ಟಿ. ಸಾಂಗ್ಲಿಯಾನ
10) ಬೆಂಗಳೂರು ದಕ್ಷಿಣ: ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ
11) ಮೈಸೂರು: ವಿಜಯ್ ಶಂಕರ್, ಸೂರಜ್ ಹೆಗ್ಡೆ
12) ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ
13) ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ
14) ರಾಯಚೂರು: ಬಿ.ವಿ. ನಾಯಕ್
15) ಬಳ್ಳಾರಿ: ವಿ.ಎಸ್. ಉಗ್ರಪ್ಪ
16) ಚಿತ್ರದುರ್ಗ: ಚಂದ್ರಪ್ಪ
17) ಚಾಮರಾಜನಗರ: ಆರ್. ಧ್ರುವನಾರಾಯಣ್
18) ಚಿಕ್ಕಬಳ್ಳಾಪುರ: ಡಾ| ಎಂ. ವೀರಪ್ಪ ಮೊಯಿಲಿ
19) ಕೋಲಾರ: ಕೆ.ಎಚ್. ಮುನಿಯಪ್ಪ
20) ಬೆಂಗಳೂರು ಗ್ರಾಮಾಂತರ: ಡಿ.ಕೆ. ಸುರೇಶ್
Comments are closed.