ಬೆಂಗಳೂರು: ಕೇಂದ್ರ ಸಚಿವ ಅಂತಕುಮಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ ನೇತ್ರತ್ವದಲ್ಲಿ ಇಂದು ರಾಜ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರನ್ನು ಭೇಟಿ ಮಾಡಿ ದೂರನ್ನು ಸಲ್ಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಬಿಜೆಪಿ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅನಂತ್ ಕುಮಾರ್ ಹೆಗ್ಡೆ ಅವರು, ರಾಹುಲ್ ಅವರ ಬ್ರಹ್ಮಣ ಹೇಳಿಕೆಯನ್ನು ಟೀಕೆ ಮಾಡಿದ್ದರು. ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ, ಆದ್ರೆ ಮಗ ಹೇಗೆ ಬ್ರಾಹ್ಮಣನಾಗಲು ಸಾಧ್ಯ? ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಇರದ ಹೈಬ್ರಿಡ್ ತಳಿ ಕಾಂಗ್ರೆಸ್ ಲ್ಯಾಬ್‍ನಲ್ಲಿ ಮಾತ್ರ ಇದೆ. ರಾಹುಲ್ ಗಾಂಧಿ ಸುಳ್ಳು ಹೇಳಿದರೂ ನಂಬುವಂತಹ ಸುಳ್ಳು ಹೇಳಬೇಕು. ರಾಹುಲ್ ಡಿಎನ್‍ಎ ಟೆಸ್ಟ್ ಮಾಡಬೇಕೆಂದು ಎಂದಿದ್ದರು.
ರಾಹುಲ್ ಗಾಂಧಿ ಅವರ ಹುಟ್ಟು ಹಾಗೂ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ದೇಶಕ್ಕಾಗಿ ಪ್ರಾಣಕೊಟ್ಟ ಕುಟುಂಬದ ಭಾವನೆಗಳಿಗೆ ನೋವುಂಟಾಗುವಂತೆ ಸಚಿವರು ಹೇಳಿಕೆ ನೀಡಿದ್ದಾರೆ. ಸಚಿವರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಧರ್ಮ, ಮತ ಆಧಾರದಲ್ಲಿ ಜನರ ಮತವನ್ನು ಪಡೆಯಲು ಸಚಿವರು ಯತ್ನಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಅಲ್ಲದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಮುಕ್ತವಾದ ನ್ಯಾಯಯುತ ಚುನಾವಣೆ ನಡೆಸುವ ಉದ್ದೇಶದಿಂದ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿ ಮಾಡಿದೆ.
Comments are closed.