ಕರ್ನಾಟಕ

ಚುನಾವಣಾ ನೀತಿಸಂಹಿತೆ ಉಲ್ಲಂಘನೆ: ಆನಂದ್‌ ಸಿಂಗ್‌ ಗೆ ಜಾಮೀನು ರಹಿತ ವಾರಂಟ್‌ ಜಾರಿ

Pinterest LinkedIn Tumblr

ಬಳ್ಳಾರಿ: ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದ ಆರೋಪದ ಮೇಲೆ ವಿಜಯನಗರ ಶಾಸಕ ಆನಂದ ಸಿಂಗ್‌ ಅವರಿಗೆ ಜಾಮೀನು ರಹಿತ ವಾರಂಟ್‌ ಜಾರಿಯಾಗಿದೆ. ಈ ಕುರಿತಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಆನಂದ ಸಿಂಗ್‌ ಅವರನ್ನು ವಿಚಾರಣೆ ಮಾಡುವ ಉದ್ದೇಶದಿಂದ ಕೋರ್ಟ್‌ಗೆ ಹಾಜರಾಗಲು ಕೋರಿ ಮೂರು ಬಾರಿ ಸಮನ್ಸ್‌ ಜಾರಿ ಮಾಡಿತ್ತು. ಆದರೆ ಮೂರು ಬಾರಿಯೂ ಆನಂದ್‌ ಸಿಂಗ್‌ ಅವರು ಕೋರ್ಟ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇಂದು ನ್ಯಾಯಾಲವು ಶಾಸಕ ಆನಂದ್‌ ಸಿಂಗ್‌ ಅವರಿಗೆ ಜಾಮೀನುರಹಿತ ವಾರಂಟ್‌ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ವಿಚಾರಣೆಯ ವೇಳೆ ಆನಂದ್‌ ಸಿಂಗ್‌ ಅವರ ಗೈರಿಗೆ ಸಿಟ್ಟಾದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ಅವರು ‘ಇವರಿಗೆಲ್ಲಾ ವಿಚಾರಣೆ ತಪ್ಪಿಸಿಕೊಳ್ಳುವುದೇ ಒಂದು ಚಾಳಿಯಾಗಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

Comments are closed.