ಕರ್ನಾಟಕ

ನಗೆಪಾಟಲಿಗೀಡಾದ ಚೌಕಿದಾರ್ ’ (ನಾನೂ ಕಾವಲುಗಾರ) ಯಡಿಯೂರಪ್ಪ!

Pinterest LinkedIn Tumblr


ಬೆಂಗಳೂರು: ಮೈ ಭೀ ಚೌಕಿದಾರ್​’ (ನಾನೂ ಕಾವಲುಗಾರ) ಅಭಿಯಾನದ ದೇಶಾದ್ಯಂತ ಭಾರೀ ಜೋರಾಗಿ ನಡೆಯುತ್ತಿದೆ. ಈಗಾಗಲೇ ಈ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವಿಟರ್​ ಖಾತೆಯಲ್ಲಿ ತಮ್ಮ ಹೆಸರನ್ನು ‘ಚೌಕಿದಾರ್​ ನರೇಂದ್ರ ಮೋದಿ’ ಎಂದು ಬದಲಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ, ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಹೆಸರಿನ ಹಿಂದೆ ಚೌಕಿದಾರ್​ ಎಂದು ಸೇರಿಸಿಕೊಂಡು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರು ಕೂಡ ಅಭಿಯಾನಕ್ಕೆ ಬೆಂಬಲಿಸಲೋಗಿ ನಗೆಪಾಟಲಿಗೀಡಾಗಿದ್ದಾರೆ.

ಈ ಅಭಿಯಾನದ ಭಾಗವಾಗಿದ್ದೇನೆ ಎಂದು ಪ್ರತಿಕ್ರಿಯಿಸಿರುವ ಬಿ.ಎಸ್​​ ಯಡಿಯೂರಪ್ಪ ಅವರು ಟ್ವಿಟರ್​​​ನಲ್ಲಿ ಏನೋ ಬರೆಯುವ ಮೂಲಕ ಅಪಹಾಸ್ಯಕ್ಕೀಡಾಗಿದ್ದಾರೆ. ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬರು ಮೈ ಭೀ ಚೌಕಿದಾರ್ ಅಭಿಯಾನಕ್ಕೆ ಬೆಂಬಲ ನೀಡಬೇಕು. ಭಯೋತ್ಪಾದನೆ, ಭ್ರಷ್ಟಚಾರ ವಿರುದ್ಧ ಹೋರಾಡಲು; ದೇಶದಲ್ಲಿನ ಬಡತನ ನಿರ್ಮೂಲನೆ ಮಾಡಲು ಈ ಅಭಿಯಾನ ಬೆಂಬಲಿಸುವ ಹೊಸ ಸಮಾಜ ಕಟ್ಟೋಣ ಎಂದು ಬರೆದುಕೊಂಡಿದ್ದಾರೆ.

ಟ್ವಿಟರ್‌ನಲ್ಲಿ #MainBhiChowkidar ಹ್ಯಾಷ್‌ಟ್ಯಾಗ್‌ ಟಾಪ್‌ ಟ್ರೆಂಡ್‌ ಆಗಿದೆ. ಜತೆಗೆ ಪರ ವಿರೋಧದ ಚರ್ಚೆಯೂ ಜೋರಾಗಿ ಸಾಗಿದೆ. ಈ ಮಧ್ಯೆ ಬಿ.ಎಸ್​​ ಯಡಿಯೂರಪ್ಪನವರು ಬರೆದುಕೊಂಡಿರುವ ಟ್ವೀಟ್​​​ ಅನ್ನು ರೀಟ್ವೀಟ್​​​ ಮಾಡುವ ಮೂಲಕ ಮಾಜಿ ಸಿಎ. ಅವರನ್ನು ಅಪಹಾಸ್ಯಕ್ಕೀಡು ಮಾಡಲಾಗಿದೆ.

ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂದು ಪ್ರಧಾನಿ ಮೋದಿಯನ್ನು ಟೀಕಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ‘ಮೈ ಭೀ ಚೌಕಿದಾರ್’(ನಾನೂ ಕಾವಲುಗಾರ) ಅಭಿಯಾನ ಶುರು ಮಾಡಿದ್ದಾರೆ. ಇದೀಗ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ಸಿಗುತ್ತಿದೆ. ಅದೇ ಮಾದರಿ ಬಿಎಸ್​​ ಯಡಿಯೂರಪ್ಪನವರು ಕೂಡ ತಮ್ಮ ಹೆಸರಿನ ಹಿಂದೆ ಚೌಕಿದಾರ್​​ ಎಂದು ಸೇರಿಸಿಕೊಂಡಿದ್ದಾರೆ.

Comments are closed.