ಶೃಂಗೇರಿ: ಮಂಡ್ಯದಲ್ಲಿ ಚುನಾವಣೆ ಕಣಕ್ಕಿಳಿಯಲು ಸಜ್ಜಾಗಿರುವ ನಿಖಿಲ್ ಕುಮಾರಸ್ವಾಮಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆಯಾ?
ಹೀಗೆಂದು ಶೃಂಗೇರಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಏಕೆಂದರೆ ನಾಮಪತ್ರಕ್ಕೆ ಪೂಜೆ ಸಲ್ಲಿಸಲು ಶೃಂಗೇರಿಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ, ತೋರಣಗಲ್ಲು ಗಣಪ ಬಳಿ ಈಡುಗಾಯಿ ಒಡೆದರು.
ಐದು ತೆಂಗಿನಕಾಯಿಗಳ ಪೈಕಿ ನಾಲ್ಕು ಮಾತ್ರ ಒಡೆದಿದೆ. ಮತ್ತೊಂದು ಒಡೆಯಲಿಲ್ಲ ಎಂದು ತಿಳಿದುಬಂದಿದೆ.
ಆ ನಂತರ ಅರ್ಚಕರೇ ಅದನ್ನು ತೆಗೆದುಕೊಂಡು ಒಡೆದರು.
ಒಟ್ಟು 9 ತೆಂಗಿನ ಕಾಯಿ ಒಡೆಯಬೇಕಾಗಿತ್ತು. ಕುಮಾರಸ್ವಾಮಿ, ಪತ್ನಿ ಅನಿತಾ ಒಂದೊಂದು ತೆಂಗಿನ ಕಾಯಿ ಒಡೆದರು. ನಿಖಿಲ್ ಐದು ಒಡೆದರು. ಅದರಲ್ಲಿ ಒಂದು ಮಿಸ್ ಆಯಿತು.
ಇದು ಒಳ್ಳೆಯ ಶಕುನವಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
Comments are closed.