ಕರ್ನಾಟಕ

ಬಿಜೆಪಿ ಪ್ರಥಮ ಪಟ್ಟಿ: ಈ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಯಾಕೆ ಬಿಡುಗಡೆ ಮಾಡಿಲ್ಲ ಗೊತ್ತಾ?

Pinterest LinkedIn Tumblr


ಬೆಂಗಳೂರು: ಕೇಂದ್ರ ಸಚಿವ ಜಗತ್​ ಪ್ರಕಾಶ್​ ನಡ್ಡಾ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ 21 ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿದೆ. ಆದರೆ ಏಳು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇನ್ನೂ ಟಿಕೆಟ್​ ಘೋಷಿಸಿಲ್ಲ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಮಂಡ್ಯ ಕ್ಷೇತ್ರಕ್ಕೆ ಟಿಕೆಟ್​ ಘೋಷಣೆಯಗಲಿದೆಯಾ ಇಲ್ಲವಾ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿ ಬಂದಿದ್ದವು. ಈಗಾಗಲೇ ಮುಖ್ಯಮಂತ್ರಿ ಎಚ್​ ಡಿ ಕುಮಾರಸ್ವಾಮಿ ಮಗ ನಿಖಿಲ್​ ಕುಮಾರಸ್ವಾಮಿ ಮತ್ತು ದಿವಂಗತ ಅಂಬರೀಶ್​ ಹೆಂಡತಿ ಸುಮಲತಾ ಅಂಬರೀಶ್​ರ ಸ್ಪರ್ಧೆಯಿಂದ ಕ್ಷೇತ್ರದ ಚುನಾವಣೆ ಬಗ್ಗೆ ರಾಜ್ಯಾದ್ಯಂತ ಕುತೂಹಲ ಮನೆ ಮಾಡಿದೆ. ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದನ್ನು ನೋಡಿದರೆ ಸುಮಲತಾರಿಗೆ ಬಾಹ್ಯ ಬೆಂಬಲ ಘೋಷಿಸುವ ಸಾಧ್ಯತೆ ಕಾಣುತ್ತಿದೆ.

ಯಾವ ಕ್ಷೇತ್ರಗಳ ಅಭ್ಯರ್ಥಿ ಘೊಷಣೆಯಾಗಿಲ್ಲ?:
ಬೆಂಗಳೂರು ದಕ್ಷಿಣ
ಬೆಂಗಳೂರು ಗ್ರಾಮಾಂತರ
ಮಂಡ್ಯ
ಕೋಲಾರ
ಕೊಪ್ಪಳ
ರಾಯಚೂರು
ಚಿಕ್ಕೋಡಿ

ಈ ಮೇಲಿನ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಬಿಜೆಪಿ ಹೈಕಮಾಂಡ್​ ಘೋಷಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, “2019ರ ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 21 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿವೆ. ಉಳಿದ 7 ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಿಲ್ಲ. ಎಲ್ಲ ಕ್ಷೇತ್ರಗಳ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿಲ್ಲ, ಅದನ್ನು ಹೈಕಮಾಂಡ್ ಪ್ರಕಟಿಸಲಿದೆ,” ಎಂದಿದ್ದಾರೆ.

ಟಿಕೆಟ್​ ಘೋಷಣೆಯಾಗದಿರಲು ಕಾರಣವೇನು?:
ಚಿಕ್ಕೋಡಿಯಲ್ಲಿ ಅಪ್ಪಾಸಾಹೇಬ್ ಜೊಲ್ಲೆ ಮತ್ತು ರಮೇಶ್​ ಕತ್ತಿ ನಡುವೆ ಪೈಪೋಟಿ.
ಬೆಂಗಳೂರು ಗ್ರಾಮಾಂತರ ಸಿ.ಪಿ. ಯೋಗೇಶ್ವರ್ ಗೆ ಕೊಡಬೇಕೋ, ಮಗಳಿಗೆ ಕೊಡಬೇಕೋ ಎಂಬ ಗೊಂದಲ.
ಕೋಲಾರದಲ್ಲಿ ಡಿ.ಎಸ್. ವೀರಯ್ಯ ಮತ್ತು ಛಲವಾದಿ ನಾರಾಯಣಸ್ವಾಮಿ ನಡುವೆ ಪೈಪೋಟಿ.
ಕೊಪ್ಪಳದಲ್ಲಿ ಹಾಲಿ ಸಂಸದರಿಗಿಲ್ಲ ಟಿಕೆಟ್. ಎರಡನೇ ಹಂತದಲ್ಲಿ ಘೋಷಣೆಯಾಗುವ ಬಗ್ಗೆಯೂ ಅನುಮಾನ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ಕೊಡುವುದಕ್ಕೂ, ಮರು ಚಿಂತನೆ.
ರಾಯಚೂರಿನಿಂದ ಅಮರೇಶ್ ನಾಯಕ್ ಮತ್ತು ಅನಂತರಾಜ್ ನಾಯಕ್ ನಡುವೆ ಪೈಪೋಟಿ.

ಟಿಕೆಟ್ ಪಡೆದ ಹೊಸ ಮುಖಗಳು:
ಬಳ್ಳಾರಿ – ದೇವೇಂದ್ರಪ್ಪ
ಹಾಸನ – ಎ.ಮಂಜು
ಚಿತ್ರದುರ್ಗ- ಎ.ನಾರಾಯಣಸ್ವಾಮಿ
ಗುಲಬರ್ಗಾ- ಡಾ.ಉಮೇಶ್ ಜಾಧವ್

ಟಿಕೆಟ್​ ಪಡೆದ ಹಾಲಿ ಸಂಸದರು:
ಸುರೇಶ್ ಅಂಗಡಿ- ಬೆಳಗಾವಿ
ಗದ್ದಿಗೌಡರ್ – ಬಾಗಲಕೋಟೆ
ರಮೇಶ್ ಜಿಗಜಿಣಗಿ- ವಿಜಯಪುರ
ಭಗವಂತ ಖೂಬಾ- ಬೀದರ್
ಶಿವಕುಮಾರ ಉದಾಸಿ- ಹಾವೇರಿ
ಪ್ರಹ್ಲಾದ್ ಜ್ಯೋಷಿ-ಧಾರವಾಡ
ಅನಂತಕುಮಾರ ಹೆಗಡೆ-ಉತ್ತರ ಕನ್ನಡ
ಜಿ.ಎಂ.ಸಿದ್ದೇಶ್ವರ- ಧಾವಣಗೆರೆ
ಬಿವೈ, ರಾಘವೇಂದ್ರ- ಶಿವಮೊಗ್ಗ
ಶೋಭಾ ಕರಂದ್ಲಾಜೆ- ಉಡುಪಿ ಚಿಕ್ಕಮಗಳೂರು
ನಳೀನ್ ಕುಮಾರ್ ಕಟೀಲ್- ದಕ್ಷಿಣ ಕನ್ನಡ
ಪ್ರತಾಪ್ ಸಿಂಹ್ – ಮೈಸೂರು
ಸದಾನಂದಗೌಡ- ಬೆಂಗಳೂರು ಉತ್ತರ
ಪಿ.ಸಿ.ಮೋಹನ್- ಬೆಂಗಳೂರು ಕೇಂದ್ರ
ಹಾಲಿ 14 ಸಂಸದರಿಗೆ ಟಿಕೆಟ್ ಘೋಷಣೆ

Comments are closed.